ಕಾಲ ಬೈರೇಶ್ವರ ಜಯಂತಿ

ಕೋಲಾರ,ಜ.೭: ನಗರದ ಶ್ರೀ ಕೋಲಾರಮ್ಮ ದೇವಾಲಯದಲ್ಲಿ ನೆಲಸಿರುವ ಶ್ರೀ ಕಾಲಬೈರೇಶ್ವರ ಸ್ವಾಮಿಗೆ, ಕಾಲಬೈರೇಶ್ವರ ಜಯಂತಿ ಅಂಗವಾಗಿ ವಿಷೇಶ ಪೂಜೆ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು.
ಜಯಂತಿ ಅಂಗವಾಗಿ ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು.
ಪ್ರಧಾನ ಅರ್ಚಕರಾದ ಶ್ರೀ ಸೋಮಶೇಖರ್ ದೀಕ್ಷಿತ್, ಶ್ರೀ ವಿನಯ್ ದೀಕ್ಷಿತ್, ಶ್ರೀ ಕಾರ್ತಿಕ್ ದೀಕ್ಷಿತ್ ರವರುಗಳು ದೇವತಾ ಕಾರ್ಯಗಳನ್ನು ನೆರವೇರಿಸಿದರು.