ಕಾಲ ಬದಲಾದಂತೆ ಭಾಷೆ ಬದಲಾಗುತ್ತಿದೆ: ಡಾ. ಪ್ರಕಾಶ ಪಾಟೀಲ

ಬಸವಕಲ್ಯಾಣ:ಅ.17: ಆಡಳಿತ ವ್ಯವಸ್ಥೆ ಮತ್ತು ಕಾಲ ಬದಲಾದಂತೆ ಭಾಷೆಗಳು ಬದಲಾವಣೆ ಮೇಲೆ ಪ್ರಭಾವ ಬಿರುತ್ತದೆ ಎಂದು ಜಿ. ಪಂ. ಮಾಜಿ ಉಪಾಧ್ಯಕ್ಷ ಪ್ರಕಾಶ ಪಾಟೀಲ ಘಾಟಬೋರಳ ರವರು ಉದ್ಗಾರ ತೆಗೆದರು. ನಮ್ಮ ಜಿಲ್ಲೆ ಹೈದ್ರಾಬಾದ ನಿಜಾಮನ ಆಡಳಿತದಲ್ಲಿ ಸೇರಿದಾಗ ಇಲ್ಲಿಯ ಕನ್ನಡ ಮತ್ತು ಮರಾಠಿ ಭಾಷೆಗಳು ಬೆಳವಣಿಗೆ ಕುಂಠಿತಗೊಂಡಿದೆ ಎಂದರು.
ಸ್ಥಳಿಯ ಜೀಜಾಮಾತಾ ಶಾಲೆಯಲ್ಲಿ ವಿನಯ ಪ್ರಕಾಶನ ತಳಭೋಗ ಮತ್ತು ಅಖೀಲ ಭಾರತೀಯ ಪರಿವರ್ತನ ಮರಾಠಿ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಉತ್ಕರ್ಷ ಆತ್ಮ ಚರಿತ್ರೆ ಸೂರ್ಯಕಾಂತ ಸಸಾನೆ ಕುರಿತಾದ ಗ್ರಂಥಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮತಾನಾಡಿದ ಡಾ. ಪಾಟೀಲ ಭಾಲ್ಕಿ ಮತ್ತು ಘಾಟಬೋರಳದ ಶಿಕ್ಷಣ ಸಂಸ್ಥಯ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಕೆಲಸ ಮಾಡುವ ನನಗೆ ಸಾಹಿತ್ಯ ಮತ್ತು ಶಿಕ್ಷಣ ಕುರಿತಾದ ಅನುಭವ ಎಂದರೆ ಗಡಿಭಾಗದಲ್ಲಿ ಕನ್ನಡ ಮರಾಠಿ ಬಾಷೆ ಹೊರಾಟ ಮುಗಿದ ಅಧ್ಯಾಯ ಕಾರಣ ಎಲ್ಲರೂ ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ಬೇಕು ಎನ್ನುತ್ತಿದ್ದಾರೆ ಕಾಲ ಬದಲಾದಂತೆ ಶಿಕ್ಷಣ ಮತ್ತು ಸಂಸ್ಕ್ರತಿ ಬಲದಾಗುತ್ತದೆ ಎಂದರು.
ಬಾಬು ಹೊನ್ನಾನಾಯಕ ಅಧ್ಯಕ್ಷರು ಹೊನ್ನಾನಾಯಕ ಜನತಾ ಎಂಜುಕೇಶನ್ ಸೂಸಾಯಿಟಿ ಬಸವಕಲ್ಯಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ನಾನು ಸಹ ಹತ್ತಾರು ಶಾಲೆ ಕಾಲೇಜಗಳು ನಡೆಸುತ್ತಿದ್ದೇನೆ. ಭಾಲ್ಕಿ ತಾಲೂಕಿನ ಡಾವರಗಾಂವ ವಸಂತ ಪ್ರೌಢ ಶಾಲೆ ಕನ್ನಡ ಮತ್ತು ಮರಾಠಿ ಮಾಧ್ಯಮ ಶಾಲೆಗಳಿವೆ ಆದರೆ ಮರಾಠಿ ಜನರು ಸಹ ಕನ್ನಡ ಮತ್ತು ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಆಯಾ ರಾಜ್ಯದ ಭಾಷೆ ಕಲಿಯುವುದು ಜನರು ಇಷ್ಟ ಪಡುತ್ತಾರೆ ಎಂದರು. ನಿಜಾಮನ ಆಡಳಿತ ಉರ್ದು ಆಗಿತ್ತು. ಕನ್ನಡ ಆಡಳಿತದಲ್ಲಿ ಕನ್ನಡ ಕಲಿಯುವುದು ಅನಿವಾರ್ಯ ಎಂದರು.
ಮಾಜಿ ಶಾಸಕ ಎಂ.ಜಿ.ಮುಳೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಶಿಕ್ಷಣ ಮಾತೃ ಭಾಷೆಯಲ್ಲಿ ನಡೆಯಬೇಕು. ಪ್ರಾಂತಿಯ ಭಾಷೆಗಳು ಉಳಿದು ಬೆಳೆಯಬೇಕು. ಸಸಾನೆ ಆತ್ಮಚರಿತ್ರೆ ಪುಸ್ತಕದಿಂದ ನಮ್ಮೇಲರಿಗೆ ಕಷ್ಟದ ಜೀವನದಲ್ಲಿ ಸಾಧನೆ ಹೇಗೆ ಮಾಡಬೇಕು ಎಂಬುವುದು ತಿಳಿಸಿ ಕೊಡುತ್ತದೆ. ಸಸಾನೆ ಲೇಖನವನ್ನು ಪ್ರತಿಭೆ, ಕೂಲಿಕಾರ್ಮಿಕನಾಗಿ, ಶಿಕ್ಷಕನಾಗಿ, ಸಾಹಿತಿಯಾಗಿ ಬಸವಣ್ಣ-ಶಿವಾಜಿ, ಅಂಬೇಡ್ಕರ ಮತ್ತು ಅಣ್ಣಾಭಾವು ಸಾಠೆ ಯವರ ಜಯಂತಿ ಆಚರಿಸಿದ್ದು ಅವರ ಬಹುಭಾಷಾ ಮತ್ತು ಬಹುಮುಖಿ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಸಾಹಿತ್ಯ ಮತ್ತು ಪುಸ್ತಕ ಲೇಖಕ ಸೂರ್ಯಕಾಂತ ಸಸಾನೆಯವರ 50ನೇ ಹುಟ್ಟು ಹಬ್ಬ ವೇದಿಕೆಯಲ್ಲಿ ಆಚರಿಸಲಾಯಿತು. ಹಿರಿಯರೇಲ್ಲರು ಸೇರಿ ಸಸಾನೆ ದಂಪತಿಗಳಿಗೆ ಸತ್ಕರಿಸಿದರು. ಈ ಸಂದರ್ಭದಲ್ಲಿ ಓಂಕಾರ ಗುರುಜಿ, ಹುಲಸೂರ ತಹಸೀಲ್ದಾರ ಶಿವಾನಂದ ಮೇತ್ರೆ, ಉಪಾನ್ಯಾಸಕ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದ್ಲೆಗಾಂವ, ನೂಲಿಯ ಚಂದಯ್ಯ ಮಠದ ಚಿತ್ರಮ್ಮ ತಾಯಿ, ಉರಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮಿಜಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ, ಮಿಲಿಂದ ಗುರುಜಿ ಉಮ್ಮಾಪುರ ಮುಂದಾದವರು ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀಬಾಯಿ ಪಾಟೀಲ, ತಬ್‍ಸುಮ ಫೈಜೋದ್ದಿನ ಚೌಧರಿ, ಅಮರದೀಪ ಪಾಟೀಲ, ಶಿವಾನಂದ ಜಾಧವ, ರಮೇಶ ಹಣಮಂತ್ತೆ ಲಾತೂರ ಮುಂತಾದವರು ಉಪಸ್ಥಿತರಿದ್ದರು.
ಅತಿಥಿಗಳಿಗೆ ಸ್ವಾಗತ ಸೂರ್ಯಕಾಂತ ಸಸಾನೆ ಮರಾಠಿ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ, ಪ್ರಾಸ್ತಾವಿಕ ಇಂದುಮತಿ ಸುತಾರ, ವಂದನಾರ್ಪಣೆ ದತ್ತಾತ್ರಯ ಜಾಧವ ತಳಭೋಗ ಮಾಡಿದರು.