ಕಾಲ ಕೆಟ್ಟಿಲ್ಲ- ಮನಸ್ಸು ಕೆಟ್ಟಿದೆ: ಬಸವಲಿಂಗ ಅವಧೂತರು

ಭಾಲ್ಕಿ :ಫೆ.7: ಮನುಷ್ಯನ ಮನಸ್ಸು ಸಂಕೋಚಿತಗೊಂಡಿದೆ ಸ್ವಾರ್ಥಕಾಗಿ ಜೀವನ ನಡೆಸುತ್ತಿದ್ದಾನೆ ಕಾಲ ಕೆಟ್ಟಿದೆ ಎಂದು ದೂರುತ್ತಿದ್ದೇನೆ ಅವನ ಮನಸ್ಸು ಕೆಟ್ಟಿದ್ದೆ ಎಂದು ಅರ್ಥಮಾಡಿಕೊಳ್ಳುತ್ತಿಲ್ಲ
ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ಭಾಲ್ಕಿ ತಾಲ್ಲೂಕಿನ ಹುಣಜಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ಸೋಮವಾರ ನಡೆದ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮೇಲು – ಕೀಳು ಎನ್ನದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಗ್ರಾಮದಲ್ಲಿ ಸೌರ್ಹಾದತೆಯಿಂದ ಬದುಕು ಸಾಗಿಸಬೇಕು, ಆಡಂಬರದ ಜೀವನ ನಡೆಸಬೇಡಿ. ಸರಳತೆಯಿಂದ ಇನ್ನೊಬ್ಬರ ಮನಸ್ಸು ಗೆಲ್ಲಿ ಎಂದು ಹೇಳಿದರು.
ಮಾದಕ ವಸ್ತುಗಳ ಚಟಕ್ಕೆ ಬಿದ್ದು ಅನೇಕ ಯುವಕರು ತಮ್ಮ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಆರೋಗ್ಯ ಹಾಳಾಗುತ್ತದೆ ಪೆÇೀಷಕರು ಮಕ್ಕಳನ್ನೂ ಪೆÇಷಿಸಿಕೊಳ್ಳಬೇಕು ಎಂದು ನುಡಿದರು
ಎಲ್ಲರೂ ಕಾಯಕ ಮಾಡಿ ಬದುಕು ಸಾಗಿಸಬೇಕು, ಪರಮಾತ್ಮನನ್ನು ದಿನಾಲು ಬೆಳಗಿನ ಜಾವ ಪೂಜಿಸಬೇಕು ಅಲ್ಲದೇ ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಬಾಳಬೇಕು ಎಂದು ನುಡಿದರು. ವಚನ ಸಾಹಿತ್ಯ ಸೇರಿದಂತೆ ಮಹಾತ್ಮರ ಜೀನವ ಸಾಧನೆ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು. ಜೀವನ ನಶ್ವರ ಇದೆ. ಇರುವಷ್ಟು ದಿನ ಪರೋಪಕಾರಿಯಾಗಿ ಬದುಕುಸಾಗಿಸಿ. ನಿಮ್ಮ ಮನಸ್ಸು ಚೆನ್ನಾಗಿದರೆ ಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಗ್ರಾಮದ ಮುಖ್ಯ ದ್ವಾರದಿಂದ ಶ್ರೀ ಲಕ್ಷ್ಮಿ ದೇವಸ್ಥಾನದ ವರೆಗೆ ಶ್ರೀಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು.
ಪ್ರಮುಖರಾದ ಹುಲೆಪ್ಪ ಮಾನಕಾರಿ, ಪ್ರಕಾಶ ಗೌಡಪ್ಪನೋರ್, ಜಗನ್ನಾಥ ಸಿರಂಜೆ, ಮಾಣಿಕರಾವ ಪಾಟೀಲ, ಧೂಳಪ್ಪ ಜಮಾದರ, ಭಗವಂತರಾವ ಭಂಗೂರ, ಗಿರೀಶ ಕುಲಕರ್ಣಿ, ಗುರುನಾಥ ಗೌಡಪ್ಪನೋರ್ ಮೊದಲಾವರು ಇದ್ದರು.