ಕಾಲ್ಗೆಜ್ಜೆ ಬಳಿಕ ಮಡಿಕೇರಿ ದಶಕದ ಬಳಿಕ ದೃಶ್ಯಕಾವ್ಯ

ದಶಕದ ಹಿಂದೆ ಕಾಲ್ಗೆಜ್ಜೆ ಚಿತ್ರ ನಿರ್ದೇಶಿಸಿದ್ದ ಎ.‌ಬಂಗಾರು  ಇದೀಗ ” ಮಡಿಕೇರಿ” ಕಡೆ ಹೊರಟ್ಟಿದ್ದು ಸುಂದರ ದೃಶ್ಯ ಕಾವ್ಯವನ್ನು ಚಿತ್ರದ ಮೇಲೆ ಕಟ್ಟಿಕೊಡಲು‌ ಮುಂದಾಗಿದ್ದಾರೆ. ಚಿತ್ರದ ಶೀರ್ಷಿಕೆ  ಅನ್ನು   ಹಿರಿಯ ನಿರ್ದೇಶಕ  ಎಸ್. ಮಹೇಂದರ್ ಅನಾವರಣ  ಮಾಡಿ ಶುಭ ಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಎ.ಬಂಗಾರು ಇದೊಂದು ಸುಮಧುರ ದೃಶ್ಯಕಾವ್ಯ, ಸಂಗೀತವೇ ಚಿತ್ರದ ಜೀವಾಳವಾಗಿರುತ್ತದೆ. ಮೂರು ಬೇರೆ ಬೇರೆ ಕುಟುಂಬದ ಟ್ರಾಕ್ ನಲ್ಲಿ ಕಥೆ ಸಾಗುತ್ತದೆ. ಸುಹಾಸಿನಿ  ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನರಂಜನಾತ್ಮಕ ಕಥಾಹಂದರವುಳ್ಳ  ಚಿತ್ರಕ್ಕೆ ಪೃಥ್ವಿ ಅಂಬರ್  ನಾಯಕರಾಗುವ ಸಾಧ್ಯತೆಯಿದೆ.  ಶಾಲಿನಿ ಭಟ್ ಚಿತ್ರದ ನಾಯಕಿ. ಟೈಟಲ್ ಝಲಕ್ ಅನಾವರಣಕ್ಕೋಸ್ಕರವೇ ಹಾಡೊಂದರ ಚಿತ್ರೀಕರಣ ಮಾಡಿದ್ದು, ನವಂಬರ್ ಹೊತ್ತಿಗೆ ಚಿತ್ರದ ಮುಹೂರ್ತ ಮತ್ತು ಶೂಟಿಂಗ್ ಮಾಡಲಾಗುವುದು’ ಎಂದರು. ನಿರ್ಮಾಪಕ ರವಿ ಶ್ಯಾಮನೂರು ಮಾತನಾಡಿ, ಪದವಿಪೂರ್ವ ಸಿನೆಮಾ ನಿರ್ಮಾಣ ಮಾಡಿದ್ದೆ. ಇದೀಗ ಮಡಿಕೇರಿ ಸಿನೆಮಾಗೆ ಕೈ ಜೋಡಿಸಿದ್ದೇನೆ” ಎಂದರೆ ಇನ್ನೊಬ್ಬ ನಿರ್ಮಾಪಕ ಶಿವಪ್ರಕಾಶ್ ಮಾತನಾಡಿ, ಕಾಲ್ಗೆಜ್ಜೆ ಸಿನೆಮಾ ನೋಡಿ ಬಂಗಾರು ಗೆ ಅಡ್ವಾನ್ಸ್ ಕೊಟ್ಟಿದ್ದೆ. ಇಷ್ಡವಾದ ಕಥೆ ಎಂದರು.

ಸಂಗೀತ ನಿರ್ದೇಶಕರಾಗಿ ಗಂಧರ್ವ ಮಾಹಿತಿ ನೀಡಿ, ‘ಇದೊಂದು ಸಂಗೀತಮಯ ಚಿತ್ರ ಎಂದರೆನಾಯಕಿ ಶಾಲಿನಿ ಭಟ್, ನಟಿ ಭವಾನಿ ಪ್ರಕಾಶ್ ಮಾತನಾಡಿ ಅನುಭವ ಹಂಚಿಕೊಂಡರು. ಚಿತ್ರದಲ್ಲಿ ಅಚ್ಯುತಕುಮಾರ್, ಸುಧಾರಾಣಿ, ಅನುಪ್ರಭಾಕರ್, ಶ್ರೀ ಶಂಭು ಸೇರಿದಂತೇ ಮಜಾಭಾರತ ಖ್ಯಾತಿಯ ಬಸು, ವಿನೋದ್ ಗೊಬ್ರಗಾಲ, ಸುಷ್ಮಿತಾ ಸೇರಿದಂತೇ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ.

ಮಹೇಂದರ್ ಬೇಸರ

ಇತ್ತೀಚಿನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳು ಕಡಿಮೆ ಆಗುತ್ತಿವೆ ಎಂದು ಹಿರಿಯ ನಿರ್ದೇಶಕ ಮಹೇಂದರ್ ಅಸಮಾಧಾನ ಹೊರ ಹಾಕಿದ್ದಾರೆ. ಮಡಿಕೇರಿ ಸವಿಷಯಾಧಾರಿತ ಚಿತ್ರವಾಗಿ ಹೊರಹೊಮ್ಮಲಿದೆ ಎನ್ನುವ ಭರವಸೆ ಇದೆ ಎಂದರು.