ಕಾಲೇಜ ಜೀವನ ಸ್ವಾರ್ಥಕ್ಕಾಗಿ ಬಳಸಿಕೊಂಡರೆ ಬದುಕು ಉದ್ದಾರವಾಗುವುದಿಲ್ಲ

ಕಲಬುರಗಿ:ಫೆ.27:ವಿದ್ಯಾರ್ಥಿಗಳೆಂದರೆ ಭವ್ಯ ಭಾರತದ ಭವಿಷ್ಯತ್ತಿನ ಕನಸುಗಳು ಕಾಲೇಜು ಎಂದರೆ ಎರಡು ಕಾಲುಗಳ ಮೇಲೆ ಬದುಕನ್ನು ರೂಪಿಸುವ ಹಂತವಾಗಿದೆ. ಕಾಲೇಜು ಎಂದರೆ ಕೇವಲ ಫ್ಯಾಶನ್ ಅಲ್ಲ. ಕಾಲೇಜ ಜೀವನವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರೆ ಬದುಕು ಉದ್ದಾರವಾಗುವುದಿಲ್ಲ ಎಂದು ಪರಮ ಪೂಜ್ಯ ಶ್ರೀ. ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತ ಮಠ ಯಡ್ರಾಮಿ ಎಂದರು.
ಅವರು ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಕಾಲೇಜು ಕಲಬುರಗಿಯಲ್ಲಿ ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ “ಉನ್ನತ ಶಿಕ್ಷಣಕ್ಕೆ ರಹದಾರಿ” ಕಾರ್ಯಕ್ರಮವನ್ನು ಉದ್ಘಾಟಿಸಿದ ಪರಮ ಪೂಜ್ಯ ಶ್ರೀ. ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತ ಮಠ ಯಡ್ರಾಮಿ ಅವರು ಮಾತನಾಡುತ್ತ ಕೆಲವೊಬ್ಬರು ಸಾಧನೆ ಮಾಡುವವರು ಬದುಕುವದಕ್ಕಾಗಿ ಆಹಾರ ಸ್ವೀಕರಿಸುತ್ತಾರೆ. ಕೆಲವೊಬ್ಬರು ತಿನ್ನುವದಕ್ಕಾಗಿಯೇ ಬದುಕಿರುತ್ತಾರೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು. ಕಣ್ಣು ಇರದವರು ಅಂಗವಿಕಲರು ಕೂಡ ಅದ್ಭುತ ಸಾಧನೆ ಮಾಡಿದ್ದಾರೆ ಅವರ ಸಾಧನೆಯ ಬದುಕು ನಮಗೆ ಸ್ಪೂರ್ತಿಯಾಗಬೇಕು. ಜಗತ್ತು ನಮ್ಮನ್ನು ನೋಡುವಂತೆ ನಾವು ಸಾಧಿಸಬೇಕು. ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಸಾಧನೆ ನಮಗೆ ಸ್ಪೂರ್ತಿಯಾಗಬೇಕು. ಸಾಧನೆ ಮಾಡುವ óಛಲ, ಗುರಿ, ಪ್ರಯತ್ನವಿದ್ದರೆ ಅದಕ್ಕೆ ಯಾವುದು ಅಡ್ಡಿಯಾಗುವುದಿಲ್ಲ, ಕಣ್ಣಿರದ ವ್ಯಕ್ತಿ ಜಗತ್ತಿಗೆ ಕಣ್ಣನ್ನು ತೆರೆಯಿಸಿದರು, ಅವರೆ ಡಾ| ಪುಟ್ಟರಾಜ ಗವಾಯಿ ಶಕ್ತಿ ಹೊಂದಿದರು. ಸಮಾಜದ ಹಿತಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಅಣ್ಣಾ ಹಜಾರೆಯವರು, ಚೀಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡುವ ಮೂಲಕ ಭಾರತ ದೇಶದ ಕೀರ್ತಿಯನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದ ಅವರು ನಮಗೆ ಆದರ್ಶವಾಗಬೇಕು. ಚಲನಚಿತ್ರ ಕ್ಷೇತ್ರದಲ್ಲಿ, ಸಂಗೀತ ಕ್ಷೇತ್ರದಲ್ಲಿ, ಕ್ರೀಡೆಯಲ್ಲಿ ಸಾಧನೆ ಮಾಡಿದವರ ಸಾಧನೆಯ ಹಿಂದೆ ಅಪಾರ ಪರಿಶ್ರಮವಿದೆ. ಛಲದಿಂದ ಸಾಧಿಸಿದವುರು ಟಿ.ವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ನಮ್ಮ ಬದುಕು ನಮಗೆ ಸಾಕ್ಷಾತ್ಕಾರವಾಗಬೇಕು. ಬೇರೆಯವರ ಬದುಕು ನೋಡಿ ಬದುಕಬೇಡಿ ನಿಮ್ಮ ಬದುಕು ನಿಮ್ಮದಾಗಬೇಕು. ಜೀವನದುದ್ದಕ್ಕೂ ವಿದ್ಯಾರ್ಥಿಗಳಂತೆ ಓದುತ್ತಿರಬೇಕು, ಬದುಕಿನ ಅಂಚಿನ ಕೊನೆಯವರೆಗೂ ಓದಬೇಕು. ಆಗ ನಿಮ್ಮ ವ್ಯಕ್ತಿತ್ವ ಅರಳುತ್ತದೆ, ಸಾಧನೆ ಅನಾವರಣಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಸರ್ವಜ್ಞ ಕಾಲೇಜು ಮಕ್ಕಳಿಗೆ ಉನ್ನತ ಮೌಲ್ಯಧಾರಿತ ಶಿಕ್ಷಣ ನೀಡುವದರೊಂದಿಗೆ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿರುವದು ಶ್ಲಾಘನೀಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಶಿಕ್ಷಣ ತಜ್ಞರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಕುಮಾರ ಕಣವಿ ಸಂಗೀತ ನಿರ್ದೇಶಕರು, ಗಾಯಕರು ಬೆಂಗಳೂರು ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಎಲ್ಲರ ಮನರಂಜಿಸಿತ್ತು. ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಅರ್ಥಗರ್ಭಿತವಾದ ಹಾಡುಗಳನ್ನು ಹಾಡುತ್ತ ಸಂಗೀತದ ರಸದೌತಣ ನೀಡಿ ಎಲ್ಲರ ಮನರಂಜಿಸಿದರು.

ಅತಿಥಿಗಳಾದ ಶ್ರೀ ಅಭಿಜಿತಕುಮಾರ ಭೌತಶಾಸ್ತ್ರ ವಿಭಾಗ, ಆರ್. ವಿ. ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು ಅವರು ಮಾತನಾಡುತ್ತ ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಜೀವನದಲ್ಲಿ ಉತ್ತಮವಾದ ಪಾಠವನ್ನು ಕಲಿಯಬೇಕು ಪ್ರತಿದಿನ ಹೊಸ ಪ್ರಯತ್ನಮಾಡಿ ನಿಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಡಾಕ್ಟರ, ಇಂಜನಿಯರ್. ಐ.ಎ.ಎಸ್. ಐ.ಪಿ.ಎಸ್. ಸ್ಪರ್ದಾತ್ಮ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆ ಪಡೆಯಲು ಉನ್ನತ ಗುರಿ, ಆದರ್ಶ ಕಲಿಕೆ ಇವುಗಳನ್ನು ಬೆಳೆಸಿಕೊಳ್ಳಿ. ನಿಮಗೆ ಉತ್ತಮ ರೀತಿಯಲ್ಲಿ  ಭೋಧಿಸುವ ಮಾರ್ಗದರ್ಶನ ನೀಡುವ ಗುರುಗಳು ಇಲ್ಲಿದ್ದಾರೆ. ನಾನು ಪ್ರೊ. ಚನ್ನಾರಡ್ಡಿ ಪಾಟೀಲ ಅವರ ವಿದ್ಯಾರ್ಥಿ ಎಂಬ ಹೆಮ್ಮೆ ನನಗಿದೆ ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣುವ “ವಿದ್ಯಾರ್ಥಿ ದೇವೋಭವ” ಎಂದು ಮಕ್ಕಳಲ್ಲಿ ಉತ್ತಮ ಶಿಕ್ಷಣ ಸಂಸ್ಕಾರ ನೀಡುವ ಮಾನವೀಯ ಮೌಲ್ಯಗಳನ್ನು ಬಿತ್ತುವ ಸಂಸ್ಥೆಯಾಗಿದೆ ಎಂದು ಶ್ಲಾಫಸಿದರು.
ಸಂಸ್ಥೆಯ ಸಂಸ್ಥಾಪಕರಾದ ಪ್ರೋ. ಚನ್ನಾರಡ್ಡಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಶ್ರೇಷ್ಠ ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ಹೋಗುವ ಶಕ್ತಿಯಿದೆ. ಪ್ರಾಮಾಣಿಕ ಪ್ರಯತ್ನ ಗುರಿ ಸಾಧಿಸುವ ಛsÀಲ ಹೊಂದಿರಬೇಕು ಕೇವಲ ತೂಕದಿಂದ ಭಾರವಾಗಿ ಬದುಕದೆ ಒಳ್ಳೆಯ ವ್ಯಕ್ತಿಯಾಗಿ  ಬದುಕಿದಾಗ ಮಾತ್ರ ಈ ಕಾಲೇಜಿನಲ್ಲಿ ಓದಿದ್ದಕ್ಕೆ ಒಂದು ವ್ಯಕ್ತಿತ್ವ ಬರುತ್ತದೆ. ತಾಯಿಯ ಪ್ರೀತಿ ತಂದೆಯ ರಕ್ಷಣೆ ಶಿಕ್ಷಕರ ಮಾರ್ಗದರ್ಶನ ಪಡೆದು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬಾಳಬೇಕು ಮಕ್ಕಳಿಗೆ ಅಂಕಗಳಷ್ಟೇ ಮುಖ್ಯ ಅವರ ಸಂಸ್ಕಾರ, ಸಂಸ್ಕ್ರತಿ, ಉತ್ತಮ ವರ್ತನೆ ಇಂದಿನ ಯುವ ಪೀಳಿಗೆ ಡ್ರಗ್ಸ್, ಮೊಬೈಲ್ ಗೇಮ್‍ಗಳಲ್ಲಿ ಸಮಯವ್ಯರ್ಥ ಮಾಡದೆ ತಮ್ಮ ಶಕ್ತಿಯನ್ನು ಕೆಟ್ಟ ಕೆಲಸಗಳಿಗೆ ಉಪಯೋಗಿಸದೆ ಉತ್ತಮ ಜ್ಞಾನ ಪಡೆಯುದಲ್ಲಿ ಉಪಯೋಗಿಸಬೇಕು ತಂದೆ, ತಾಯಿಯರ ಬಗ್ಗೆ ಕಾಳಜಿ ಇರಬೇಕು, ಅವರ ವಾತ್ಸಲ್ಯಕ್ಕೆ ಮಹತ್ವ ಕೊಡಬೇಕು, ಸಮಾಜ ಮುಖಿಯಾಗಿ ಬಾಳಬೇಕು. ಯಾರ ಮನಸ್ಸನ್ನು ನೋಯಿಸಬಾರದು ಕಷ್ಟ ಪಟ್ಟು ಕೆಲಸ ಮಾಡಬೇಕು ನ್ಯಾಯಮೂರ್ತಿ ಡಾ.ಶಿವರಾಜ. ವಿ. ಪಾಟೀಲ ಅವರ ನುಡಿಮುತ್ತು “ಈಗಿನ ಮೂರು ಬೆವರಿನ ಹನಿಗಳು ಮುಂಬರುವ ನೂರು ಕಣ್ಣೀರಿನ ಹನಿಗಳನ್ನು ತಡೆಯುತ್ತವೆ.” ಮಕ್ಕಳ ಬದುಕು ರೂಪಿಸುವಲ್ಲಿ ಶಿಕ್ಷಕರ ಶ್ರಮದಷ್ಟೇ ಮಕ್ಕಳ ಆಸಕ್ತಿಯು ಮುಖ್ಯವಾಗಿದೆ. ಯುವ ಜನಾಂಗಕ್ಕೆ ಉತ್ತಮ ಮೌಲ್ಯಾಧಾರತ ಶಿಕ್ಷಣ ನೀಡುವದು ಅಗತ್ಯವಾಗಿದೆ ಉತ್ತಮ ಶಿಕ್ಷಣ ಪಡೆದು ಎಲ್ಲರೂ ನಿಮ್ಮ ಕಡೆ ಕಣ್ಣೆತ್ತಿ ನೋಡುವಂತೆ ನಿಮ್ಮ  ಊರಿನ ಜನ ಸಮಾಜ ನಿಮ್ಮ ಬಗ್ಗೆ ಹೆಮ್ಮೆ ಪಡುವಂತೆ ಸಾಧನೆ ಮಾಡಿ. ಉತ್ತಮ ಭವಿಷ್ಯ ನಿರ್ಮಿಸಿಕೊಂಡು ಸಮಾಜದಲ್ಲಿ ಸುಸಂಸ್ಕ್ರತ ನಾಗರಿಕನಾಗಿ ಬಾಳಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಯಾವುದೇ ಕಾರಣಕ್ಕೂ ದುಶ್ಚಟಕ್ಕೆ ಬಲಿಯಾಗಬೇಡಿ, ನೀವೇ ನಿಮ್ಮ ಜೀವನದ ಶಿಲ್ಪಿಗಳು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಸಾರ್ಥಕವಾದ ಬದುಕು ತಮ್ಮದಾಗಿಸಿಕೊಳ್ಳಬೇಕೆಂದು ಪ್ರೇರೇಪಿಸಿದರು. 
ಕಾಲೇಜಿನ ಪ್ರಾಚಾರ್ಯರಾದ ಶ್ರೀ. ಎಂ.ಸಿ. ಕಿರೇದಳ್ಳಿ ಸ್ವಾಗತಿಸಿದರು ಶ್ರೀಮತಿ ವಿನುತಾ ಆರ್.ಬಿ, ಶ್ರೀ ಪ್ರಶಾಂತ ಕುಲಕರ್ಣಿ. ಶ್ರೀ ಪ್ರಭುಗೌಡ ಸಿದ್ಧರಡ್ಡಿ, ಶ್ರೀ ಕರುಣೇಶ ಹಿರೇಮಠ, ಶ್ರೀ ಗುರುರಾಜ ಕುಲಕರ್ಣಿ, ಶ್ರೀ ಪಂಚಾಕ್ಷರಿ ಕಣವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 2022-23 ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿಸದರು,  ಕು. ಮಧು ತಂಡದವರು ಪ್ರಾರ್ಥಿಸಿದರು.