ಕಾಲೇಜ್ ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಟ ಬಸ್ ನಿಲ್ದಾಣದ ಕಂಟ್ರೋಲರ್ ಅಧಿಕಾರಿಗಳಿಗೆ ಮುತ್ತಿಗೆ

ಲಿಂಗಸುಗೂರು.ಸೆ.೨೪-ಲಿಂಗಸುಗೂರು ಬಸ್ ನಿಲ್ದಾಣದ ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ತಮ್ಮ ಊರುಗಳಿಗೆ ಹೊಗಲು ಹೆಚ್ಚು ಬಸ್ ಬಿಡಬೇಕು ಎನ್ನುವ ಮೂಲಕ ಬಸ್ ನಿಲ್ದಾಣದ ಕಂಟ್ರೋಲರ್ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆದಿದೆ.
ಏಕೆಂದರೆ ಇಲ್ಲಿರುವ ವಿವಿಧ ಕಾಲೇಜನಲ್ಲಿ ವಿದ್ಯಾಭ್ಯಾಸ ಮಾಡಲು ಬರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ವಿಲ್ಲದೆ ವಿದ್ಯಾರ್ಥಿಗಳಿಗೆ ತಮ್ಮ ಊರುಗಳಿಗೆ ತೆರಳಲು ಅನಾನುಕೂಲ ವಾಗುತ್ತದೆ ನಗರದಲ್ಲಿ ವಿವಿಧ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ರ್ನಸ್ಸಿಂಗ್ ಡಿಪ್ಲೋಮಾ ಪದವಿ ಕೋರ್ಸ್ ಸೈನ್ಸ್ ಕೋರ್ಸ್ ಜಿಟಿ ಟಿಸಿ ಕಾಲೇಜು ವಿದ್ಯಾರ್ಥಿಗಳು ಮತ್ತು ಇನ್ನಿತರ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾಯಂಕಾಲ ೪ಗಂಟೆಯಿಂದ ಹಾಗೂ ಬೆಳಿಗ್ಗೆ ೮=೨೦ರಿಂದ ಕಾಲೇಜು ಟೈಂಗೆ ಬರೆದಿದ್ದ ಕಾರಣ ನಮ್ಮ ವಿಧ್ಯಾಭ್ಯಾಸ ಕುಂಠಿತ ಗೊಳ್ಳುತ್ತದೆ.
ಒಂದು ಕಡೆ ಕಾಲೇಜಿನ ಆಡಳಿತ ಮಂಡಳಿ ಟೈಂ ಸರಿಗೆ ಕಾಲೇಜಿಗೆ ಹಾಜರು ಆಗಬೇಕು ಎಂದು ಆದೇಶ ಹೊರಡಿಸುವ ಮೂಲಕ ತಮ್ಮ ಜವಾಬ್ದಾರಿ ವಹಿಸುತ್ತಾರೆ ಮತ್ತೊಂದು ಕಡೆ ಲೇಟಾಗಿ ಕಾಲೇಜಿಗೆ ಹೊದರೆ ದಂಡ ಕಟ್ಟುವಂತೆ ಆಡಳಿತ ಮಂಡಳಿಯಿಂದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಕಾಲೇಜಿನಲ್ಲಿ ಕೂಡ ಇಂತಹ ಆದೇಶಗಳನ್ನು ತರುವುದರ ಮೂಲಕ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ಸಂಜೆ ವಾಣಿ ಪತ್ರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಇನ್ನು ಬಸ್ ನಿಲ್ದಾಣದ ಕಂಟ್ರೋಲರ್ ಅಧಿಕಾರಿಗಳುಬೆಕಾ ಬಿಟ್ಟಿ ಯಾಗಿ ವಿದ್ಯಾರ್ಥಿಗಳಿಗೆ ಹಾರಿಕೆ ಉತ್ತರ ಕೊಟ್ಟು ಬಸ್ ಡಿಪೋ ಮ್ಯಾನೇಜರ್ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಏಕೆಂದರೆ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್ ಬಿಡಬೇಕಾದರೆ ಡಿಪೋ ಮ್ಯಾನೇಜರ್ ಬಿಡಬೇಕು ಎನ್ನುವ ಮಾತನ್ನು ಹಾಡಿ ಬಸ್ ನಿಲ್ದಾಣದ ಕಂಟ್ರೋಲರ್ ಅಧಿಕಾರಿಗಳು ಹಾಗೂ ಡಿಪೋ ಮ್ಯಾನೇಜರ್ ಚೆಲ್ಲಾಟ ವಾಡುತಿದ್ಧಾರೆ ಎಂದು ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ.
ರೂಟ ಬಸ್ ಇಲ್ಲದೆ ಇರುವುದು ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಎದುರಾಗಿದೆ ಹೆಚ್ಚಾಗಿ ಹಟ್ಟಿ ಗೌಡುರು ಮಾಚನೂರ ಚಿಂಚರಕಿ ಹಿರಾ ವಂದಲಿ ಹೊಸುರ ನಿಲೋಗಲ್ ಗಜ್ಜಲಗಟ್ಟಾ ಆನ್ವರಿ ನಗನೂರ ಈ ಗ್ರಾಮಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಲಿಂಗಸುಗೂರು ನಗರದಲ್ಲಿ ಇರುವ ವಿವಿಧ ಕಾಲೇಜುಗಳಲ್ಲಿ ಸೀಟು ಪಡೆದು ವ್ಯಾಸಾಂಗ ಮಾಡಬೇಕಾದರೆ ಬಸ್ ಸೌಲಭ್ಯ ವಿಲ್ಲದೆ ವಿದ್ಯಾರ್ಥಿಗಳ ಬದುಕು ಬಹಳ ದುಸ್ತರವಾಗಿದೆ ಎಂದು ಸಾರ್ವಜನಿಕರು ಬಸ್ ಡಿಪೋ ಮ್ಯಾನೇಜರ್ ಇವರಿಗೆ ಒತ್ತಾಯಿಸಿದ್ದಾರೆ ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್ ಬಿಡದಿದ್ದರೆ ವಿದ್ಯಾರ್ಥಿಗಳ ಜೋತೆ ಕೈಜೋಡಿಸಿ ಬಸ್ ನಿಲ್ದಾಣದ ಹೊರಾಟಕ್ಕೆ ಮುಂದಾಬೇಕಾಗುತ್ತದೆ ಎಂದು ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳ ಪಾಲಕರು ಮತ್ತು ನಾಗರಿಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.