ಕಾಲೇಜ್ ಪ್ರಾರಂಭ:ವಿದ್ಯಾರ್ಥಿಗಳ ಕಡಿಮೆ ಹಾಜರಿ

ಸಂಡೂರು ನ:18 ಕೋವಿಡ್ -19 ಹಿನ್ನಲೆಯಲ್ಲಿ ಸುಮಾರು 8 ತಿಂಗಳ ಬಿಡುವಿನ ನಂತರ ಸರ್ಕಾರದ ಮಾರ್ಗಸೂಚಿಯಂತೆ ಪದವಿ, ಸ್ನಾತಕೊತ್ತರ ಹಾಗೂ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭದ ದಿನದಲ್ಲೇ ಸ್ನಾತಕೋತ್ತರ, ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳಲ್ಲಿ ಹಾಜರಾತಿ ಪ್ರಮಾಣ ಬಹುತೇಕ ಕಡಿಮೆಯಾಗಿದ್ದು, ಯಶವಂತನಗರದ ಸಂಡೂರಿನ ಪಾಲಿಟೆಕ್ನಿಕ್ ಕಾಲೇಜಿಗೆ ಐವರು ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು, ಪ್ರಥಮ ದಿನವಾದ ಮಹಾವಿದ್ಯಾಲಯಕ್ಕೆ 35 ವಿದ್ಯಾರ್ಥಿಗಳು ಹಾಜರಾಗಿರುವುದು ವಿಶೇಷ.
ಕಾಲೇಜು ಆರಂಭದ ಹಿನ್ನಲೆಯಲ್ಲೇ ಕಾಲೇಜನ್ನು ಸ್ಯಾನಿಟೈಜರ್ ಮಾಡಲಾಗಿ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳಿಗೆ ತರ್ಮಲ್ ಸ್ಕ್ರೀನಿಂಗ್ ನಡೆಲಸಾಯಿತು. ಆರಂಭದ ದಿನದಲ್ಲೇ ಬಹುತೇಕ ವಿದ್ಯಾರ್ಥಿಗಳು ತಪಾಸಣಾ ಪತ್ರ ತರದ ಕಾರಣ ವಿದ್ಯಾರ್ಥಿಗಳನ್ನು ಕೊವಿಡ್ ತಪಾಸಣೆ ಮಾಡಿಸಕೊಂಡು ಕಾಲೇಜಿಗೆ ಬರುವಂತೆ ಹೇಳಿ ಕಳುಹಿಸಿದ್ದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ|| ಹುಚ್ಚು ಸಾಹೇಬರವರು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕೇಂದ್ರದ ನಿರ್ಧೇಶಕ ಡಾ|| ಶರತ್‍ರವರು ವಿದ್ಯಾರ್ಥಿಗಳಿಗೆ ಹೇಳಿ ಕಳುಹಿಸಿದರು.
ಪಾಜಿಟಿವ್ ಬಂದಿಲ್ಲ : ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 75 ವಿದ್ಯಾರ್ಥಿಗಳು ತೋರಣಗಲ್ಲಿನಲ್ಲಿ 72 ವಿದ್ಯಾರ್ಥಿಗಳು ಕೊವಿಡ್ ತಪಾಸಣೆ ಒಳಪಟ್ಟು ಯಾವ ಇದ್ಯಾರ್ಥಿಗಳಲ್ಲೂ ಪಾಜಿಟಿವ್ ಫಲಿತಾಂಶ ಬಾರದೇ ನೆಗಟಿವ್ ಫಲಿತಾಂಶ ಬಂದಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ|| ಗೋಪಾಲ ರಾವ್ ತಿಳಿಸಿದರು.