ಕಾಲೇಜ್ ಪ್ರಾರಂಭ:ಬಾರದ ವಿದ್ಯಾರ್ಥಿಗಳು

ಸಿರುಗುಪ್ಪ, ನ.17: ತಾಲೂಕಿನಲ್ಲಿ 2020-21ನೇ ಸಾಲೀನ ಶೈಕ್ಷಣಿಕ ತರಗತಿಗಳು ಇಂದಿನಿಂದ ಪ್ರಾರಂಭವಾಗಿದ್ದು ಕಾಲೇಜು ಕಡೆ ಮುಖ ಮಾಡದ ವಿದ್ಯಾರ್ಥಿಗಳು.
ತಾಲೂಕಿನಲ್ಲಿ 7 ಪದವಿ ಕಾಲೇಜ್‍ಗಳು ಇದ್ದು, ಎರಡು ಸರ್ಕಾರಿ ಕಾಲೇಜ್, 5 ಖಾಸಗಿ ಕಾಲೇಜ್‍ಗಳು ಇವೆ
ರಾಜ್ಯ ಸರ್ಕಾರವು ಇಂದಿನಿಂದ ಎಲ್ಲಾ ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ವಿಶ್ಯವಿದ್ಯಾಲಗಳು, ಖಾಸಗಿ ವಿಶ್ವವಿದ್ಯಾಲಯಗಳು, ಸರ್ಕಾರಿ, ತಾಂತ್ರಿಕ, ಡಿಪ್ಲೋಮೊ, ಅನುದಾನ, ಅನುದಾನರಹಿತ ಕಾಲೇಜ್‍ನ ಶೈಕ್ಷಣಿಕ ಸಂಸ್ಥೆಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಕಾಲೇಜ್ ಪ್ರಾರಂಭಿಸುವಂತೆ ಆದೇಶ ನೀಡಿದೆ.

ಸರ್ಕಾರದ ಸುತ್ತೋಲೆಯಂತೆ ಕಾಲೇಜ್‍ನ್ನು ಪ್ರಾರಂಭಿಸಿದ್ದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ತರಗತಿಗೆ ಹಾಜರಿ ಆಗಬೇಕು, ಸ್ಯಾನಿಟೆಸರ್ ಬಳಕೆ ಮಾಡಬೇಕು, ಸಾಮಾಜಿಕ ಅಂತರ ಪಾಲಿಸಬೇಕು, ಕಾಲೇಜ್‍ನ ಆವರಣದಲ್ಲಿ ಉಗುಳುವುದನ್ನು ನಿಲ್ಲಿಸಬೇಕು, ಕುಡಿಯುವ ನೀರು, ಉಪಹಾರ ಮನೆಯಿಂದ ತರಬೇಕು, ಯಾರೊಂದಿಗೆ ಹಂಚಿಕೊಂಡು ತಿನ್ನಬಾರದು ಎಂದು ಕಾಲೇಜಿನ ಸೂಚನ ಫಲಕಕ್ಕೆ ತಿಳಿಸಿದ್ದು, ಕಾಲೇಜ್‍ಗೆ ಬರುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸರು ಕಡ್ಡಾಯವಾಗಿ ಕೋವಿಡ್-19 ಪರಿಕ್ಷೆಯ ಪ್ರಮಾಣ ಪತ್ರ ತರುವಂತೆ ತಿಳಿಸಲಾಗಿದ್ದು, ನಗರಸಭೆಯ ಸಹಾಯದಿಂದ ಕೊಠಡಿಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ ಮಾಡಿಸಲಾಗಿದೆ, ಕೋವಿಡ್-19 ಎಲ್ಲಾ ಮುನ್ನೆಚ್ಚರಿಕೆನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬಿ.ಬಸವರಾಜ, ಪ್ರಾಂಶುಪಾಲರು, ಟಿ.ಎಸ್.ಎಚ್.ಎಂ.ಎಸ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಸಿರುಗುಪ್ಪ