ಕಾಲೇಜ್ ಕವನ ಕಥೆಗಳ ಬರಹದಲ್ಲಿ ಸಾಧನೆ

ಗುರುಮಠಕಲ್ :ನ.7: ತಾಲೂಕಿನ ರಾಂಪೂರ (ಜಿ) ಗ್ರಾಮದ ಯುವಕ ಬಿ. ಹೆಚ್. ತಿಮ್ಮಣ್ಣ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮೇಳನದಲ್ಲಿ ಕಾವ್ಯಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಸಂದರ್ಭದ

ರೈತಾಪಿ ಕುಟುಂಬದಲ್ಲಿ ಜನಿಸಿದ ಈತನು ಚಿಕ್ಕ ವಯಸ್ಸಿನಿಂದಲೂ ಸಾಹಿತ್ಯದ ಅಭಿರುಚಿ ಹೊಂದಿ, ಕವನ-ಕಥೆಗಳನ್ನು ಓದಿಕೊಂಡು, ನೋಡಿಕೊಂಡು ಬೆಳೆದಿದ್ದಾನೆ. ಮುಂದೊಂದು ದಿನ ಕವನ, ಕಥೆಗಳು ಉನ್ನತ ಮಟ್ಟದಲ್ಲಿ ತಲುಪಬಹುದೆಂಬ ನಂಬಿಕೆ ನಮ್ಮೆಲ್ಲರದಾಗಿತ್ತು. ಅದು ಇಂದು ಚೊಚ್ಚಲ ಪ್ರಶಸ್ತಿಯನ್ನು ಪಡೆದುಕೊಳ್ಳುವುದರ ಮೂಲಕ ಈತನ ಪ್ರಯತ್ನ ಫಲಿಸಿದಂತಾಯಿತು ಎಂದು ಹೇಳಬಹುದು. ರಾಂಪೂರ (ಜಿ) ಗ್ರಾಮದ ಯುವಕ ಬಿ. ಹೆಚ್. ತಿಮ್ಮಣ್ಣ ಡಾ. ಜೀಶಂಪ ಸಾಹಿತ್ಯ ವೇದಿಕೆ ಮಂಡ್ಯ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ಕನ್ನಂಬಾಡಿ, ಕಾವೇರಿ ಪ್ರಭ ದಿನಪತ್ರಿಕೆ ಮಂಡ್ಯ ಇವರ ಆಶ್ರಯದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜರುಗಿದ ಕನ್ನಡ ಹಬ್ಬ, 30ನೇ ರಾಜ್ಯಮಟ್ಟದ ಕವಿ-ಕಾವ್ಯ ಸಮ್ಮೇಳನದಲ್ಲಿ 21 ವರ್ಷದ ಯುವಕ ಬಿ.ಹೆಚ್. ತಿಮ್ಮಣ್ಣ ಕಾವ್ಯಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ. ಗ್ರಾಮದ ಯುವಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಗ್ರಾಮದ ದಿ. ಸಣ್ಣ ಹಣಮಂತಪ್ಪ ಮತ್ತು ಪಾರ್ವತಮ್ಮ ಬಂಗಾರಿ ದಂಪತಿಯವರ 8ನೇ ಪುತ್ರ. ಈತನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಂಪೂರ (ಜಿ) ಸ್ವಗ್ರಾಮದಲ್ಲಿ ಪ್ರಾಥಮಿಕ ವ್ಯಾಸಂಗವನ್ನು ಮುಗಿಸಿ, ಸರಕಾರಿ ಪ್ರೌಢಶಾಲೆ ಗಾಜರಕೋಟದಲ್ಲಿ ಪ್ರೌಢ ಶಿಕ್ಷಣ, ಸರಕಾರಿ ಪದವಿಪೂರ್ವ ಕಾಲೇಜು ಗಾಜರಕೋಟ ದಲ್ಲಿ ಪಿಯುಸಿ ಕಲಾ ವಿಭಾಗ ಮುಗಿಸಿ, ಈಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಠಕಲದಲ್ಲಿ ಮೂರನೇ ವರ್ಷದ ಬಿ ಎ ದಲ್ಲಿ ಓದುತ್ತಿದ್ದು, ಕಾಲೇಜ್ ಮಧ್ಯದಲ್ಲಿನ ಈ ಸಾಧನೆಗೆ ಗ್ರಾಮದ ಯುವಕರು ಗೆಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ.