ಕಾಲೇಜ್ ಆಫ್ ಡೆಂಟಲ್ ಸೈನ್ಸ್ನಲ್ಲಿ ಟೆನ್ನಿಸ್ ಪಂದ್ಯಾವಳಿ 


ದಾವಣಗೆರೆ.ಸೆ.೧೪; ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಟೆನ್ನಿಸ್ ಪಂದ್ಯಾವಳಿಯನ್ನು ನಗರದ ಕಾಲೇಜ್ ಆಫ್ ಡೆಂಟಲ್ ಸೈನ್ಸ್ನಲ್ಲಿ ಆಯೋಜಿಸಲಾಗಿದ್ದು, ಪಂದ್ಯಾವಳಿಯ ಉದ್ಘಾಟನೆಯನ್ನು ಕಾಲೇಜಿನ ನಿರ್ದೇಶಕರಾದ ಡಾ.ವಸುಂಧರ ಶಿವಣ್ಣರವರು ನೆರವೇರಿಸಿದ್ದು, ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಾವಶ್ಯಕ ಅದರಲ್ಲೂ ವೈದ್ಯಕೀಯ ರಂಗದಲ್ಲಿ ತುಂಬಾ ಬಹುಮುಖ್ಯ ಪಾತ್ರ ವಹಿಸಿದೆ. ಕ್ರೀಡೆಯಿಂದ ನಮ್ಮ ಜೀವನ ಶೈಲಿ ಆರೋಗ್ಯ ಶೈಲಿ ಸದೃಡವಾಗಿರುತ್ತದೆ ಹಾಗೂ ಉತ್ತಮ ಆರೋಗ್ಯಕರ ಜೀವನವನ್ನು ನಡೆಸಬಹುದು. ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸಿರುತ್ತದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕ್ರೀಡೆಯನ್ನು ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಎಂದು ಹೇಳಿ ಭಾಗವಹಿಸಿದ ರಾಜ್ಯದ ಎಲ್ಲಾ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಕಾಲೇಜುಗಳ ಕ್ರೀಡಾಪಟುಗಳಿಗೆ ಶುಭ ಕೋರಿ ಪಂದ್ಯಾವಳಿಗೆ ಚಾಲನೆ ನೀಡಿದರು, ಭಾಗವಹಿಸಿದ ತಂಡಗಳು ಎರಡು ದಿನಗಳ ಕಾಲ ಗೆಲುವಿಗಾಗಿ ಸೆಣಸಾಡಿ ಅಂತಿಮ ತಂಡಗಳಿಗೆ ಬಹುಮಾನ ಮತ್ತು ಪಾರಿತೋಶಕ ನೀಡಲಿದ್ದಾರೆ.ವೇದಿಕೆ ಮೇಲೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಧನ್ಯಕುಮಾರ್, ಡಾ.ಶ್ರೀನಿಧಿ, ವಿಶ್ವವಿದ್ಯಾನಿಲಯದ ವೀಕ್ಷಕರಾದ ರಾಮಾಂಜಿನಪ್ಪ, ವಿಷ್ಣು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಅರುಣ್, ಹರೀಶ್‌ಗೌಡ, ಗೋಪಾಲಕೃಷ್ಣ, ಮುಖೇಶ್ ಹಾಜರಿದ್ದರು. ಪಂದ್ಯಾವಳಿಯ ಆಯೋಜನೆಯನ್ನು ಕಾಲೇಜಿನ ಮಹೇಶ್.ಸಿ.ಪಿ., ದೈಹಿಕ ಶಿಕ್ಷಣ ನಿರ್ದೇಶಕರು, ಇವರು ವಹಿಸಿಕೊಂಡಿದ್ದರು.