ಕಾಲೇಜು ಸೇರಿ ಭಯ ಮೂಡಿಸಿದ್ದ ನಾಗರಹಾವು ಅರಣ್ಯಕ್ಕೆ

ನರೇಗಲ್,ನ25: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಗುರುವಾರ ಮಧ್ಯಾಹ್ನ ಆಹಾರ ಹುಡುಕಿಕೊಂಡ ಬಂದ ನಾಗರ ಹಾವು ಕೆಲ ಸಮಯ ವಿದ್ಯಾರ್ಥಿಗಳಲ್ಲಿ ಹಾಗೂ ಉಪನ್ಯಾಸಕರಲ್ಲಿ ಆತಂಕ ಮೂಡಿಸಿತ್ತು. ಆಗ ಪಕ್ಕದ ಕೋಚಲಾಪುರ ಗ್ರಾಮದ ಉರಗ ರಕ್ಷಕ ಮಂಜುನಾಥ ಜ್ಯೋತಿಮಠ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ನಂತರ ಅವರು ಹಾವನ್ನು ಮಾನಿಟರ್ ಮಾಡಿ ಸುರಕ್ಷಿತವಾಗಿ ಹಿಡಿದು ಮುಚ್ಚಳದ ಬಾಟಲ್ ನಲ್ಲಿ ಹಾಕಿಕೊಂಡು ದೂರದ ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ಕಾಲೇಜಿನವರ ಆತಂಕವನ್ನ ದೂರ ಮಾಡಿದ್ದಾರೆ.
ಹಾವುಗಳು ಕಪ್ಪೆ, ಮಿಡತೆ, ಇಲಿಯಂತ ಆಹಾರವನ್ನು ಅರಸಿ ಬರುವುದರಿಂದ ಈ ರೀತಿ ಜಂತುಗಳು ಮನೆಯ ಕೊಠಡಿಗೆ ಸೇರುವುದಕ್ಕೆ ಕಾರಣವಾಗಿದೆ. ಮನೆ ಹಾಗೂ ಕಾಲೇಜಿನ ಸುತ್ತಲು ಶುಚಿತ್ವ ಕಾಪಾಡಿಕೊಂಡರೆ ಹಾವುಗಳು ಮನುಷ್ಯ ವಾಸಿಸುವ ಕಡೆಗಳಲ್ಲಿ ಕಂಡು ಬರುವುದು ಕಡಿಮೆ ಎಂದು ಸಲಹೆ ನೀಡಿದರು. ಸಾರ್ವಜನಿಕರು ಯಾವುದೇ ಹಾವು ಮನೆ ಒಳಗೆ ಅಥವಾ ಕಂಪೌಂಡನಲ್ಲಿ ಅಕಸ್ಮಾತಾಗಿ ಬಂದರೆ ಕೊಲ್ಲದೆ, ಅವುಗಳನ್ನು ರಕ್ಷಿಸಿ ಅವುಗಳ ಆವಾಸಕ್ಕೆ ಬಿಡಬೇಕು. ಇದು ನಾವು ನಿಸರ್ಗಕ್ಕೆ ತೋರುವ ಗೌರವವಾಗಿದೆ ಎಂದರು. ಈ ವರೆಗೆ 51ಕ್ಕೂ ಹೆಚ್ಚು ರಕ್ಷಣೆ ಮಾಡಿರುವುದಾಗಿ ತಿಳಿಸಿದರು. ರೈಮಾನ್ ಸಾಬ್ ಚಕ್ರಿ ಇದ್ದರು.