ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಡಿ.10 ವರೆಗೆ ವಿಸ್ತರಣೆ

ಕೊಟ್ಟೂರು ನ 20 : ವಿದ್ಯಾರ್ಥಿಗಳು ಕಾಲೇಜಿಗೆ ಸಂಚರಿಸಲು ಅನುಕೂಲವಾಗುವಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದ್ದು, 2019-20ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್ ಪಾಸ್ ಬಳಸಿ ಡಿಸೆಂಬರ್ 10ರ ವರೆಗೆ ಸಂಚರಿಸಲು ಅವಕಾಶ ನೀಡಿದೆ.
ಪದವಿ, ವೈದ್ಯಕೀಯ, ತಾಂತ್ರಿಕ, ಡಿಪ್ಲೋಮಾ, ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಳೆದ ವರ್ಷದ ಬಸ್ ಪಾಸ್ ಬಳಸಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.ವಿದ್ಯಾರ್ಥಿಗಳುಈ ವರ್ಷಕಾಲೇಜಿಗೆ ದಾಖಲಾಗಿರುವ ರಸೀದಿಹಾಗೂ ಪಾಸ್ ತೋರಿಸಿ ಬಸ್ ಗಳಲ್ಲಿ ಸಂಚರಿಸಬಹುದು.