ಕಾಲೇಜು-ವಸತಿನಿಲಯಗಳನ್ನು ಇನ್ನಷ್ಟು ತಿಂಗಳು ಬಂದ್ ಮಾಡುವದು ಸೂಕ್ತಃ ಕಟ್ಟಿಮನಿ

ವಿಜಯಪುರ, ಜ.10-ಕೊರೋನಾ ವೈರಸ್ ಮಹಾಮಾರಿ ಇಡೀ ಜಗತ್ತಿಗೆ ಆವರಿಸಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ನಮ್ಮ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ಪ್ರಾರಂಭ ಮಾಡಲು ಸೂಚಿಸಿದೆ. ಆದರೆ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳನ್ನು ಪಾಲಕರು ಭಯದಿಂದ ಕಾಲೇಜಿಗೆ ಹಾಗೂ ವಸತಿ ನಿಲಯಕ್ಕೆ ಕಳಿಸುತ್ತಿದ್ದು, ಈಗ ಕೇವಲ ಬೆರಳಿಣಿಕೆ ಎಷ್ಟು ಮಾತ್ರ ವಿದ್ಯಾರ್ಥಿಗಳು ಕಾಲೇಜಿಗೆ ಹಾಗೂ ವಸತಿ ಶಾಲೆಗಳಿಗೆ ಮೂರರಿಂದ ನಾಲ್ಕು ವಿದ್ಯಾರ್ಥಿಗಳು ಮಾತ್ರ ವಸತಿ ನಿಲಯಕ್ಕೆ ಬರುತ್ತಿದ್ದಾರೆ.
ರಾಜ್ಯ ಸರಕಾರವು ಈ ರೀತಿ ತರಾತುರಿಯಲ್ಲಿ ವಸತಿ ನಿಲಯಗಳನ್ನು ಪ್ರಾರಂಬಿಸುವದರಿಂದ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ತಂಗುವುದರಿಂದ ಯಾವುದೇ ಚಿಕಿತ್ಸೆ ಇಲ್ಲದೇ ಒಂದೇ ಸ್ಥಳದಲ್ಲಿ ಒಬ್ಬರಿಂದ ಒಬ್ಬರಿಗೆ ಕೊರೀನಾ ವೈರಸ್ ತಗಲುವ ಪ್ರಮೆಯೇ ಉಂಟಾಗುತ್ತದೆ. ಆದ್ದರಿಂದ ವಸತಿ ನಿಲಯಗಳಲ್ಲಿ ಇನ್ನಷ್ಟು ತಿಂಗಳು ಅಂದರೆ ಸಂಪೂರ್ಣವಾಗಿ ಕೊರೋನಾ ಹಾವಳಿ ನಿಲ್ಲುವವರೆಗೆ ವಸತಿ ನಿಲಯಗಳನ್ನು ಬಂದ್ ಮಾಡುವದು ಸೂಕ್ತ.
ರಾಜ್ಯ ಸರಕಾರ ಶಿಕ್ಷಣ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಸಮಾಜ ಕಲ್ಯಾಣ ಇಲಾಖೆ ಸಚಿವರು ಈ ಬಡ ವಿದ್ಯಾರ್ಥಿಗಳು ಹಾಗೂ ಪಾಲಕರ ಭಯದ ವಾತಾವರಣವನ್ನು ಹೋದಮೇಲೆ ವಸತಿ ನಿಲಯಗಳನ್ನು ಹಾಗೂ ಕಾಲೇಜುಗಳನ್ನು ವ್ಯಾಕ್ಸಿನ್ ಬಂದ ನಂತರ ಪ್ರಾರಂಭಿಸುವದು ಸೂಕ್ತ ಎಂದು ಬರಡೋಲ ಮಹಿಳಾ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ಭಾರತಿ ಸಿ. ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.