ಕಾಲೇಜು ಮಟ್ಟದ ಕ್ರೀಡಾಕೂಟಗಳು ನ.೩೦ರಂದು ಲೋಯೋಲಾ ಕಾಲೇಜು ಮೈದಾನದಲ್ಲಿ-ತಿಪ್ಪಣ್ಣ ಬಾಗಲವಾಡ

ಮಾನ್ವಿ.ನ.೨೩-ತಾಲೂಕ ಮಟ್ಟದ ಕಾಲೇಜು ಕ್ರೀಡಾಕೂಟಗಳು ನವಂಬರ್ ೩೦ ಮತ್ತು ಡಿಸೆಂಬರ್ ೦೧ ರಂದು ಲೋಯೋಲಾ ಕಾಲೇಜಿನ ಮೈದಾನದಲ್ಲಿ ನಡೆಯುತ್ತವೆ ಎಂದು ಪಿ.ತಿಪ್ಪಣ್ಣ ಬಾಗಲವಾಡ ವಕೀಲರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಒಕ್ಕೂಟದ ಅಧ್ಯಕ್ಷರು ಹೇಳಿದರು.
ಪಟ್ಟಣದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರಸಕ್ತ ವರ್ಷದ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲು ದಿನಾಂಕ ೧೬-೧೧-೨೦೨೧ ರಂದು ಮಾನ್ಯ ಉಪ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಪದವಿಪೂರ್ವ ಕಾಲೇಜು ಮಟ್ಟದ ಮಾನ್ವಿ ತಾಲ್ಲೂಕು ಕ್ರೀಡಾ ಕೂಟಗಳನ್ನು ಆಯೋಜಿಸಲು ಸಿದ್ಧಾರ್ಥ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯಕ್ಕೆ ಅನುಮತಿ ನೀಡಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆ ರಾಯಚೂರು ಮತ್ತು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ ೩೦-೧೧-೨೦೨೧ ಮತ್ತು ೦೧-೧೨-೨೦೨೧ ರಂದು ಲೋಯೋಲಾ ಕಾಲೇಜಿನ ಮೈದಾನದಲ್ಲಿ ಕ್ರೀಡಾಕೂಟಗಳನ್ನು ನಡೆಸಲು ತೀರ್ಮಾನಿಸಲಾಗಿದ್ದು ಈ ಕ್ರೀಡಾಕೂಟಗಳಲ್ಲಿ ಮಾನ್ವಿ ತಾಲ್ಲೂಕಿನ ಸುಮಾರು ೧೮ ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದರಿಂದ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು.ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ.
ಈ ಕ್ರೀಡಾಕೂಟದ ಉದ್ಘಾಟನೆಯನ್ನು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜವೆಂಕಟಪ್ಪ ನಾಯಕ ದೊರೆ ಉದ್ಘಾಟಿಸಲಿದ್ದು, ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಮತ್ತು ಆನಂದ್ ರಾವ್ ಉಪನರ್ದೇಶಕರು ಪ.ಪೂ.ಶಿ.ಇಲಾಖೆ ರಾಯಚೂರು ರವರು ಜ್ಯೋತಿ ಬೆಳಗಿಸಲಿದ್ದಾರೆ .
ಈ ಕ್ರೀಡಾಕೂಟದ ಯಶಸ್ವಿಗೆ ಪತ್ರಿಕಾ ವರದಿಗಾರರು ಮತ್ತು ಪೊಲೀಸ್ ಇಲಾಖೆಯ ಸಹಕಾರ ಅತಿಮುಖ್ಯವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹನಮಂತಪ್ಪ ಹರವಿ, ಹನಮಂತಗೌಡ ದೇವಿಪುರ, ಡಾ.ಹುಲಿಯಪ್ಪ, ದುರುಗಪ್ಪ ತಡಕಲ್ ಉಪಸ್ಥಿತರಿದ್ದರು.