ಕಾಲೇಜು ಪ್ರಾರಂಭ: ಕಡಿಮೆ ಹಾಜರಾತಿ

ಬಾದಾಮಿ, ನ 18- ಸರಕಾರದ ಆದೇಶ ಹಾಗೂ ಶಿಕ್ಷಣ ಇಲಾಖೆ ಮಾರ್ಗಸೂಚಿ ಅನ್ವಯದ ಮೇರೆಗೆ ರಾಜ್ಯಾದ್ಯಂತ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಆರಂಭವಾಗಿದ್ದು ಬಾದಾಮಿ ನಗರದ ಪ್ರತಿಷ್ಠಿತ ಶ್ರೀ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಎಸ್.ಬಿ. ಮಮದಾಪೂರ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ಪದವಿ ಮಹಾವಿದ್ಯಲಯ ಶಿಕ್ಷಣ ಸಂಸ್ಥೆ ಆರಂಭವಾಗಿದ್ದು, ಕೊರೊನಾ ರೋಗದ ಭಯದಿಂದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ನಿರಸ ಪ್ರತಿಕ್ರಿಯೆ ಕಂಡು ಬಂದಿತು.
ಸರಕಾರದ ಆದೇಶದಂತೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ದ್ವಿತೀಯ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ನೇರ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಮುಖ್ಯವಾಗಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ಮತ್ತು ಕೊರೊನಾ ಪರೀಕ್ಷೆಯನ್ನು ಮಾಡಿಕೊಂಡು ನೆಗೆಟಿವ್ ಇದ್ದಲ್ಲಿ ಮಾತ್ರ ಕಾಲೇಜಿಗೆ ಬರಲು ಅವಕಾಶವನ್ನು ನೀಡಲಾಗುವುದು ಎಂದು ಪ್ರಾಚಾರ್ಯರಾದ ರವೀಂದ್ರ ಮೂಲಿಮನಿ ತಿಳಿಸಿದರು.
ನಂತರ ಮಾತನಾಡಿದ ಅವರು ಕಾಲೇಜಿನ ಆವರಣ ಮತ್ತು ಕೊಠಡಿಗಳನ್ನು ಅಲ್ಲಿರುವ ಪಿಠೋಪಕರಣಗಳನ್ನು ಹಾಗೂ ಶೌಚಾಲಯಗಳನ್ನು ಸ್ಯಾನಿಟೆಜರ ಮಾಡಲಾಗಿದ್ದು ಬರುವ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಯಿಂದ ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಪೂರ್ಣವಾಗಿ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೆ ಭಯವಿಲ್ಲದೆ ಆತ್ಮಸ್ಥೈರ್ಯದಿಂದ ತರಗತಿಗೆ ಮಾಸ್ಕ ಧರಿಸಿಕೊಂಡು ತಮಗೆ ಕುಡಿಯಲು ಬೇಕಾದ ನೀರನ್ನು ತಾವೆ ತೆಗೆದುಕೊಂಡು ಬರಬೇಕು, ಕೊಠಡಿಯಲ್ಲಿ ಅಂತರ ಕಾಪಾಡಲು ಆಸನದ ವ್ಯವಸ್ಥೆಯನ್ನು ಮಾಡಲಾಗಿದ್ದು ವಿದ್ಯಾಥಿಗಳು ಕಾಲೇಜಿಗೆ ಹಾಜರಾಗಬಹುದು ಎಂದು ತಿಳಿಸಿದರು.
ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಾರೆ ಆದರೆ ಅವರಿಗೆ ಬಸ್ ಪಾಸ್ ಇಲ್ಲದೆ ಕಾರಣ ವಿದ್ಯಾರ್ಥಿಗಳ ಆಗಮನ ಕಡಿಮೆಯಾಗಿದ್ದು, ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲು ಇನ್ನು ವರೆಗೆ ಸರಕಾರ ಆದೇಶ ನಮಗೆ ಅನುಮತಿಯನ್ನು ನೀಡಿಲ್ಲಾ ಎಂದು ರಾಜ್ಯ ಸಾರಿಗೆ ಸಂಸ್ಥೆಯವರು ಹೇಳುತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆಗಮನ ಸಂಖ್ಯೆ ಕಡಿಮೆಯಾಗಿದೆ.
ಬಾಕ್ಸ್:
ವಿದ್ಯಾರ್ಥಿಗಳು ಮತ್ತು ಪೋಷಕರು ಭಯಪಡುವ ಅವಶ್ಯಕತೆ ಇಲ.್ಲ ಮುಂದಿನ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಹಿತದೃಷ್ಠಿಯನ್ನು ಗಮನಿಸಿ ತಮಗೆ ಕೊವೀಡ್ ಪರೀಕ್ಷೆಯನ್ನು ಮಾಡಲು ತಿಳಿಸಲಾಗಿದೆ. ಹಾಸ್ಟೆಲ್ ಮತ್ತು ವಸತಿ ನಿಲಯ ಹಾಗೂ ಬಸ್ ಪಾಸ್ ಅನುಮತಿ ದೊರೆಯಬೇಕಾದರೆ ಕೋವಿಡ್ ಪರೀಕ್ಷೆ ಕಡ್ಡಾವಾಗಿದ್ದು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಇದಕ್ಕೆ ಸಹಕಾರವನ್ನು ನೀಡಬೇಕು. ಸ್ವತಃ ತಾವೆ ಮಕ್ಕಳನ್ನು ಕರೆದುಕೊಂಡು ಹೋಗಿ ಕೋವಿಡ್ ಪರಿಕ್ಷೆಯನ್ನು ಮಾಡಿಸಿ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡಬೇಕು ಎಂದು ಪಾಲಕರಲ್ಲಿ ವಿನಂತಿ.
ಪ್ರಾಚಾರ್ಯರು. ರವೀಂದ್ರ ಮೂಲಿಮನಿ, ಬಾದಾಮಿ