ಕಾಲೇಜು ತರಗತಿಗಳಲ್ಲಿ ಕೊವೀಡ್ ಮಾರ್ಗಸೂಚಿ ಕಡ್ಡಾಯ :ಹುಲಸೂರೆ

ಹುಮನಾಬಾದ:ಪಟ್ಟಣದ ತಹಸೀಲ ಕಾರ್ಯಾಲಯದ ಆವರಣದಲ್ಲಿ ಶೈಕ್ಷಣಿಕ ಸಾಲಿನ ಭೌತಿಕ ತರಗತಿಗಳನ್ನು ಪ್ರಾರಂಭಿಸುವ ಕುರಿತು ಪಟ್ಟಣದ ವಿವಿಧ ಮಹಾವಿದ್ಯಾಲಯಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಕೊವೀಡ್-19 ಪರೀಕ್ಷೆ ಕುರಿತ ಕಾರ್ಯಗಾರದಲ್ಲಿ ಮಾನ್ಯ ತಹಸೀಲ್ದಾರ ನಾಗಯ್ಯ ಹಿರೇಮಠ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಲಹೆ ನೀಡಿದರು. ಹುಮನಾಬಾದ ಸಾರ್ವಜನಿಕ ಆಸ್ತ್ರೆಯ ಮುಖ್ಯ ವೈದ್ಯಾಧಿಕಾರ ಡಾ|| ನಾಗನಾಥ ಹುಲಸೂರೆ ಮಾತನಾಡಿ ಪ್ರತಿ ವಿದ್ಯಾರ್ಥಿಯು ಕೊವೀಡ್-19 ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ನೆಗೆಟಿವ್ ವರದಿ ಮತ್ತು ಪಾಲಕರ ಒಪ್ಪಿಗೆ ಪತ್ರದೊಂದಿಗೆ ಹಾಜರಾತಿ ಅಗತ್ಯ, ಸಂಸ್ಥೆಯ ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿಯ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಜರ್ ಕಡ್ಡಾಯ, ಲಕ್ಷಣಗಳಿದ್ದರೆ ಪ್ರವೇಶ ಬಾಹಿರ, ವಿದ್ಯಾರ್ಥಿಗಳು ಮನೆಯಿಂದ ಊಟ ತೆಗೆದುಕೊಂಡು ಬಂದರೆ ಆರೋಗ್ಯಕ್ಕೆ ಉತ್ತಮ ಎಂದು ತಿಳಿಸಿದರು. ತಾಲೂಕಾ ಆರೋಗ್ಯ ಅಧಿಕಾರಿ ಡಾ|| ಅಶೋಕ ಮೈಲಾರೆ ಮಾತನಾಡಿ ತಾಲೂಕಿನ ಎಲ್ಲಾ ವಿದ್ಯಾ ಸಂಸ್ಥೆಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಕೋವಿಡ್ ಪರೀಕ್ಚೆ ಮಾಡಲು ಕ್ರಮವಹಿಸಲಾಗಿದೆ ಎಂದರು. ಹುಮನಾಬಾದ ಪಟ್ಟಣದ ಶ್ರೀ ವೀರಭದ್ರೇಶ್ವರ ಪದವಿ ಕಾಲೇಜು, ಸರಕಾರಿ ಪದವಿ ಕಾಲೇಜು, ಭೋದಿವೃಕ್ಷ ಪದವಿ ಕಾಲೇಜು, ಸರ್ವೊದಯ ಪದವಿ ಕಾಲೇಜು, ಬಸವಸಾಗರ ಪದವಿ ಕಾಲೇಜು, ಎಸ್.ಬಿ.ಸಿ ಕಲಾ & ವಿಜ್ಞಾನ ಕಾಲೇಜು, ಎಸ.ವಿ.ಇ ಟ್ರಸ್ಟ್ ಪದವಿ ಪೂರ್ವ ಕಾಲೇಜು, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಹೆಚ್.ಕೆ.ಡಿ.ಇ.ಟಿ ಪಾಲಿಟೆಕ್ನಿಕ್ , ಎಸ್‍ವಿಇಟಿಎಸ್ ಫಾರ್ಮಸಿ ಕಾಲೇಜು, ರಾಮ & ರಾಜ ಪದವಿ ಪೂರ್ವ ಕಾಲೇಜು, ಹೆಚ್‍ಕೆಡಿಇಟಿ ಬಿಎಡ್ ಕಾಲೇಜು, ಶಾಹೀನ್ ಪದವಿ ಪೂರ್ವ ಕಾಲೇಜು ಈ ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.