ಕಾಲೇಜು ಅಭಿವೃದ್ಧಿಗೆ ವಿದ್ಯಾರ್ಥಿ ಶುಲ್ಕ:ಖಂಡನೆ

ಕಲಬುರಗಿ ಜು 19: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಅಭಿವೃದ್ಧಿಗೆವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಬಳಕೆ ಮಾಡಿ ಎಂದುಉನ್ನತ ಶಿಕ್ಷಣ ಸಚಿವರು ನಿರ್ದೇಶನ ನೀಡಿದ್ದಾರೆ.ಆರ್ಥಿಕ ಸ್ವಾಯತ್ತತೆಗಾಗಿ ವಿದ್ಯಾರ್ಥಿಗಳನ್ನು ಆದಾಯದ ಮೂಲವಾಗಿ ಪರಿಗಣಿಸುವ ನಿರ್ಧಾರವನ್ನುಎಐಡಿಎಸ್‍ಓ ರಾಜ್ಯ ಕಾರ್ಯದರ್ಶಿಅಜಯ್ ಕಾಮತ್ ಖಂಡಿಸಿದ್ದಾರೆ.
ಈ ನಿರ್ಧಾರವು ಶಿಕ್ಷಣಕ್ಕೆ ಸರ್ಕಾರ ನೀಡಬೇಕಾದ ಅನುದಾನವನ್ನು ಕಡಿತಗೊಳಿಸಿ,ಕ್ರಮೇಣ ಆ ಜವಾಬ್ದಾರಿಯಿಂದ ಸಂಪೂರ್ಣ ಕೈತೆಗೆಯುವ ಹುನ್ನಾರವಾಗಿದೆ.ಕಾಲೇಜುಗಳ ಆರ್ಥಿಕ ಸ್ವಾಯತ್ತತೆಯ ಪರಿಕಲ್ಪನೆಯು ಎನ್.ಇ.ಪಿ. ಯ ಒಂದು ಭಾಗವಾಗಿದೆ ಮತ್ತು ಅದರ ಅಡಿಯಲ್ಲಿಯೇ ಈ ಯೋಜನೆಯನ್ನು ನಿರ್ದೇಶಿಸಲಾಗಿದೆ.
ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ, ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ
ವಿಷಯದಲ್ಲಿ ಸ್ವಾಯತ್ತತೆಯನ್ನು ಹೊಂದಿರುತ್ತವೆ. ಆದರೆ, ಶಿಕ್ಷಣ ಸಂಸ್ಥೆಗಳ
ಆರ್ಥಿಕ ನೆರವು, ಮೂಲಭೂತ ಸೌಕರ್ಯ ಒದಗಿಸುವುದು ಈ ಎಲ್ಲವೂ ಸಂಪೂರ್ಣ ಸರ್ಕಾರದ ಜವಾಬ್ದಾರಿ ಆಗಿರುತ್ತದೆ. ಆದರೆ, ಇಲ್ಲಿ ಅದಕ್ಕೆ ತದ್ವಿರಿದ್ಧವಾಗಿ, ಸರ್ಕಾರವು ಶಿಕ್ಷಣಕ್ಕೆ ಅನುದಾನ ಒದಗಿಸುವ ತನ್ನ ಜವಾಬ್ದಾರಿಯಿಂದಲೆ ನುಣುಚಿಕೊಳ್ಳುತ್ತಿದೆ.ಸರ್ಕಾರದ ಇಂತಹ ನೀತಿಗಳ ವಿರುದ್ಧ ವಿದ್ಯಾರ್ಥಿಗಳು ಸಂಘಟಿತರಾಗಿ ಪ್ರಬಲ ಚಳುವಳಿಯನ್ನು ಕಟ್ಟಬೇಕು. ಎಂದು ಅವರು ತಿಳಿಸಿದ್ದಾರೆ