
ಕಲಬುರಗಿ, ಅ.30:ಕಲಬುರಗಿ ಸರ್ಕಾರಿ ಮಹಿಳಾ ಪಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುವ ಸಮಾರಂಭವನ್ನು ಸಿಡಿಸಿ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಏಕೈಕ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇದಾಗಿದ್ದು, ಈ ಕಾಲೇಜಿನಲ್ಲಿ ಬಡವರ ಮಕ್ಕಳು ಓದುತ್ತಿರುವದರಿಂದ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಸಕಲ ಸೌಲಭ್ಯವನ್ನು ಒದಗಿಸಲು ತಾವು ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀಮ್ ಸುಲ್ತಾನಾ ಮಾತನಾಡಿ, ವಿದ್ಯಾರ್ಥಿನಿಯರು ಸತತ ಶ್ರಮದಿಂದ ಓದಿ ಮುಂದೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಕಾಶಿನಾಥ ಬಿರಾದಾರ ಹಾಗೂ ಲಿಂಗರಾಜ ತಾರಲ ಇವರು ಮಾತನಾಡಿದರು.
ನ್ಯಾಯವಾದಿ ಪ್ರಶಾಂತ ಕೊರಳ್ಳಿ, ಸಿಬ್ಬಂದಿ ಕಾರ್ಯದರ್ಶಿ ಎಸ್.ಎ. ಬಿರಾದಾರ, ಎನ್. ಎಸ್. ಎಸ್. ಘಟಕದ ಅರವಿಂದ ದ್ಯಾಮಾ, ಡಾ. ಸಂತೋಷ ಹಂಪ್ಲಿ, ಡಾ. ಜ್ಯೋತಿ ಕೆ.ಎಸ್., ಡಾ. ಪದ್ಮಣ ರಾಸಣಗಿ ಸಾಂಸ್ಕøತಿಕ ಕಾರ್ಯದರ್ಶಿ ಪೆÇ್ರೀ, ಮೀನಾಕ್ಷಿ ವಿಜಯಕುಮಾರ, ದೈಹಿಕ ಶಿಕ್ಷಕಿ ಪೆÇ್ರ. ಜೋತಿರೆಡ್ಡಿ, ಡಾ. ರೂಪಾಲಿ ರಾಠೋಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಡಾ. ಪದ್ಮಣ ರಾಸಣಗಿ ಪ್ರಾಸ್ತಾವಿಕವಾಗಿ ಮಾಡಿದರು. ಪ್ರೊ. ಜ್ಯೋತಿ ರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ವಿದ್ಯಾ ಜೋಶಿ ವಂದಿಸಿದರು.