ಕಾಲೇಜಿಗೆ ಸ್ಯಾನಿಟರಿ ಪ್ಯಾಡ್ ಯಂತ್ರ ಕೊಡುಗೆ

ಬೀದರ್: ನ.22:ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಚಿಟಗುಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ಯಾನಿಟರಿ ಪ್ಯಾಡ್ ಆಟೊಮೆಟಿಕ್ ಯಂತ್ರ ಕೊಡುಗೆಯಾಗಿ ನೀಡಿದೆ.

ಕ್ಲಬ್ ಪದಾಧಿಕಾರಿಗಳು ಕಾಲೇಜಿನ ಪ್ರಾಚಾರ್ಯ ಡಾ. ಸುರೇಂದ್ರ ಸಿಂಗ್ ಅವರಿಗೆ ಯಂತ್ರ ಹಸ್ತಾಂತರಿಸಿದರು.

ಋತುಮತಿ ಸಂದರ್ಭದಲ್ಲಿ ಸ್ವಚ್ಚತೆ ಹಾಗೂ ಆರೋಗ್ಯ ಕಾಯ್ದುಕೊಳ್ಳಲು ಸ್ಯಾನಿಟರಿ ಪ್ಯಾಡ್ ನೆರವಾಗಲಿದೆ. ಹೀಗಾಗಿ ವಿದ್ಯಾರ್ಥಿನಿಯರು ಯಂತ್ರದ ಸದುಪಯೋಗ ಪಡೆಯಬೇಕು ಎಂದು ರೋಟೇರಿಯನ್ ಭಾನುಮತಿ ಓಮಿನಾ ಸತೀಶ್ ಹೇಳಿದರು.

ವಿದ್ಯಾರ್ಥಿನಿಯರ ಅವಶ್ಯಕತೆ ಮನಗಂಡು ರೋಟರಿ ಕ್ಲಬ್ ಯಂತ್ರ ನೀಡಿರುವುದು ಶ್ಲಾಘನೀಯ ಎಂದು ಮಂಜುಳಾ ಮೂಲಗೆ ತಿಳಿಸಿದರು.

ವಿದ್ಯಾರ್ಥಿನಿಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ರೂಪಾಲಿ ನಿತಿನ್ ಕರ್ಪೂರ ನುಡಿದರು.

ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಕಾಲೇಜಿಗೆ ಸ್ಯಾನಿಟರಿ ಪ್ಯಾಡ್ ಯಂತ್ರ ವಿತರಿಸಲಾಗಿದೆ. ಬರುವ ದಿನಗಳಲ್ಲಿ ಕಾಲೇಜಿನಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುವುದು ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ನಿತಿನ್ ಕರ್ಪೂರ ತಿಳಿಸಿದರು.

ಡಾ. ವಿಜಯಾ ಹತ್ತಿ ವಿಶೇಷ ಉಪನ್ಯಾಸ ನೀಡಿದರು. ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸಂಜಯ್ ಹತ್ತಿ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ನಿಕಟಪೂರ್ವ ಅಧ್ಯಕ್ಷರಾದ ಡಾ. ಶ್ವೇತಾ ಮೇಗೂರ, ಡಾ. ನಿತೇಶಕುಮಾರ ಬಿರಾದಾರ, ಡಾ. ಪೃಥ್ವಿರಾಜ ಹಾಲಪ್ಪಗೋಳ್, ಪ್ರೊ. ನಫಿಸಾ ಫಾತಿಮಾ, ಉಪನ್ಯಾಸಕಿ ಗಾಯತ್ರಿ ಗಂಗು ಇದ್ದರು.

ಉಪನ್ಯಾಸಕ ಡಾ. ವೀರಶೆಟ್ಟಿ ಮೈಲೂರಕರ್ ನಿರೂಪಿಸಿದರು. ಪ್ರೊ. ಭಾಗ್ಯವತಿ ಸ್ವಾಗತಿಸಿದರು. ಪ್ರೊ. ಸಯಿದಾ ಬಾನು ವಂದಿಸಿದರು.