ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ

ಕಲಬುರಗಿ,ನ.18- ಕರೋನಾ ಮಹಾಮರಿಯಿಂದಾಗಿ ಸುಮಾರು 8-ತಿಂಗಳ ನಂತರ ಕಾಲೇಜುಗಳು ಪ್ರಾರಂಭವಾಗಿದ್ದು, ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಜಿಪಂ ಅಧ್ಯಕ್ಷೆ ಸುವರ್ಣಾ ಎಚ್.ಮಲಾಜಿ ಭೇಟಿ ನೀಡಿ ಪರಿಶೀಲಿಸಿದರು.
ಕಾಲೇಜಿನಲ್ಲಿ ಥರ್ಮಲ್ ಸ್ಕ್ರೀನಿಂಗ್, ಸಾನಿಟೈಜರ್ ಹಾಗೂ ಸಾಮಾಜಿಕ ಅಂತರ ಕಂಡುಬಂದಿದ್ದು, ವಿದ್ಯಾರ್ಥಿನಿಯರು ಮಾಸ್ಕ್ ಧರಿಸಿ, ಪಾಠ ಆಲಿಸುತ್ತಿರುವುದು ಕಂಡು ಬಂದಿರುತ್ತಿರುವುದು ಸಂತಸದ ವಿಷಯ ಎಂದ ಅವರು, ಕರೋನಾ ಮಹಾಮಾರಿಯಿಂದ ಮೊದಲ ದಿನ ಕಾಲೇಜು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಇರುವುದು ಸಹಜ ಎಂದರು.
ವಿದ್ಯಾರ್ಥಿನಿಯರು ಜೊತೆ ಚರ್ಚಿಸಿದ ಅವರು, ಯಾವುದೇ ಆತಂಕವಿಲ್ಲದೇ ಮುಂಜಾಗ್ರತ ಕ್ರಮಗಳನ್ನು ಅಳವಡಿಸಿಕೊಂಡು ದಿನಾಲು ಕಾಲೇಜಿಗೆ ಬರಲು ತಿಳಿಹೇಳಿದರು.
ಹಾಜರಿದ್ದ ವಿದ್ಯಾರ್ಥಿನಿಯರಿಗೆ ತಮ್ಮ ಸಹಪಾಠಿಗಳಿಗೆ ಸಂಪರ್ಕಿಸಿ, ಕಾಲೇಜಿಗೆ ಬರಲು ತಿಳಿಸಲು ಸೂಚಿಸಲಾಯಿತು. ಬೇಟಿ ಸಂದರ್ಭದಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಿಂದ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿದ್ದು, ಕಂಡುಬಂದಿತು. ಕಾಲೇಜು ಪ್ರಾಂಶುಪಾಲರಿಗೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಕರೋನಾ ಸೊಂಕಿನ ಭಯವಿಲ್ಲದಂತೆ, ವಾತವರಣ ಸೃಷ್ಟಿಸುವ ಹಾಗೆ ಉತ್ತಮ ರೀತಿ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಹಳೆಯ ಬಸ್ ಪಾಸ್ ತೋರಿಸಿ, ಪ್ರಯಾಣ ಮಾಡಲು ತಿಳಿಸಲಾಯಿತು.
ಅವರೊಂದಿಗೆ ಹೆಚ್.ವೈ. ಶ್ರೀಷಕುಮಾರ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಕಲಬುರಗಿ ಹಾಗೂ ಕಾಲೇಜು ಪ್ರಾಂಶುಪಾಲರಾದ ರಾಮಲಿಂಗ ಬೋಸ್ಲೆ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.