ಕಾಲೇಜಿಗೆ ಬಾರದ ವಿದ್ಯಾರ್ಥಿಗಳು


ಚಿತ್ರದುರ್ಗ.ನ.೧೭; ಇಂದಿನಿಂದ ಪದವಿ ಕಾಲೇಜುಗಳ ಆರಂಭವಾದ ಹಿನ್ನೆಲೆ ನಗರದ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅತೀ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದರು.ಜಗತ್ತಿನೆಲ್ಲೆಡೆ ಕೊವಿಡ್ ಮಹಾಮಾರಿ ಆವರಿಸಿದ್ದರಿಂದ ಕಳೆದ ಮಾರ್ಚಿ ತಿಂಗಳಿನಿಂದ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ದೇಶದ ಎಲ್ಲಾ ಶಾಲಾ ಕಾಲೇಜುಗಳನ್ನು ಮಚ್ಚಲಾಗಿತ್ತು.ಇತ್ತಿಚಿನ ದಿನಗಳಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಪದವಿ ಕಾಲೇಜುಗಳನ್ನು ತೆರೆಯಲು ಸರ್ಕಾರ ಮುಂದಾಗಿ ಇಂದಿನಿಂದ ಕಾಲೇಜಗಳಲ್ಲಿ ಪಾಠ ಪ್ರವಚನಗಳು ನಡೆಸುವಂತೆ ಆದೇಶವನ್ನು ಹೊರಡಿಸಲಾಗಿತ್ತು.
ಇದರಂತೆ ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೊದಲು ಕಾಲೇಜಿಗೆ ಕೋವಿಡ್ ಪರೀಕ್ಷೆ ನಡೆಸಿದ ಪತ್ರವನ್ನು ನೀಡಬೇಕು ನಂತರ ಕಾಲೇಜಿಗೆ ಬರಬೇಕು ಎಂದು ಸೂಚನೆಯನ್ನು ನೀಡಲಾಗಿತ್ತು.
ಕಾಲೇಜು ಪ್ರಾರಂಭಕ್ಕೆ ಮುನ್ನದಿನವೇ ಎಲ್ಲಾ ಕಾಲೇಜುಗಳಲ್ಲಿ ಸ್ಯಾನಿಟೈಸರ್ ಮಾಡಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.
ಕಾಲೇಜು ಪ್ರಾರಂಭದ ಇಂದು ಬೆಳಗ್ಗೆ ಕಾಲೇಜುಗಳಿಗೆ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಗಮಿಸಲಿಲ್ಲ. ಇದಕ್ಕೆ ಕಳೆದ ಮೂರ ದಿನಗಳಿಂದ ದೀಪಾವಳಿ ಹಬ್ಬದ ಸರ್ಕಾರಿ ರಜೆ ಇದ್ದದರಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೊವಿಡ್ ಪರೀಕ್ಷೆ ಮಾಡಿಸದೆ ಇರುವುದು ಕಾರಣವಿರಬಹುದು ಮತ್ತು ಕೋವಿಡ್ ನಡುವೆಯೂ ಕಾಲೇಜು ಓಪನ್ ಆಗಿರೋದು ಭಯ ಇರಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದರು.
ನಗರದ ಎಸ್ ಜೆಎಂ ಮಹಿಳಾ ಕಾಲೇಜಿನಲ್ಲಿ ಸಕಲ ಸಿದ್ದತೆ ಮಾಡಲಾಗಿತ್ತು. ಪ್ರತಿಯೊಬ್ಬ ವಿಧ್ಯಾರ್ಥಿನಿಯರಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಭೋಧನಾ ಕೊಠಡಿಗೆ ಆಗಮಿಸಿದ ವಿದ್ಯಾರ್ಥಿನಿಯರು ಮಾಸ್ಕ್ ಧರಿಸಿ ಕ್ಲಾಸ್ ಕೇಳಿದರು.