ಕಾಲು ಮುರಿದುಕೊಂಡ ವ್ಯಕ್ತಿಗೆ ಸಹಾಯ

ಮುದಗಲ್,ಜೂ.೧೩-
ರಾಯಚೂರು ಜಿಲ್ಲೆಯ ಐತಿಹಾಸಿಕ ಮುದಗಲ್ ಪಟ್ಟಣದ ಬೇಗಂ ಪುರದ ಪಿಂಜಾರ ಓಣಿಯ ಜಾಫರ್ ಷಾ ಮಕಾಂದಾರ್ ತಂದೆ ಮೋದ್ದಿನ್ ಶಾ ಮಕಾಂದಾರ್ ವಯಸ್ಸು ೨೮ ಇವನು ಮೇ ೧೩ ರಂದು ಪೇಂಟಿಂಗ್ ಕೆಲಸ ಮಾಡುವ ಸಂದರ್ಭದಲ್ಲಿ ಆಯಾ ತಪ್ಪಿ ಬಿದ್ದು ತನ್ನ ಎರಡು ಕಾಲು ಮುರಿದು ಕೊಂಡಿದ್ದಾನೆ.
ಈ ವ್ಯಕ್ತಿವು ಮನೆಗೆ ಆಧಾರ್ ಸ್ತಂಭ ವಾಗಿದ್ದ ಇವನ ತಾಯಿ ಮನೆ ಮನೆ ಕೆಲಸ ಮಾಡಿ ಜೀವನ ನಡೆಸುತ್ತಾಳೆ ಈ ವಿಷಯ ತಿಳಿದಂತೆ ಕಲ್ಯಾಣ ಕರ್ನಾಟಕ ದರ್ವೇಸು ಅಲೆಮಾರಿ ಅರೇ ಅಲೆಮಾರಿ ಕ್ಷೇಮ ಅಭಿವೃದ್ದಿ ಸಂಘವೂ ಜಾಫರ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ದ ಬಗ್ಗೆ ವಿಚಾರಿಸಿ ಚಿಕಿತ್ಸೆಗೆ ಹತ್ತು ಸಾವಿರ ರೂಪಾಯಿ ಸಹಾಯ ಧನ ನೀಡಲಾಯಿತು. ಜಾಫರ್ ಷಾ ಇವರು ತೀರಾ ಬಡವನಾಗಿದ್ದು ತನ್ನ ಎರಡು ಕಾಲು ಮುರಿದು ಕೊಂಡಿದ್ದಾನೆ ಇವನ ಜೀವನ ೬ ತಿಂಗಳ ಕಾಲ ಬೆಡ್ ಮೇಲೆ ಮಲಗುವಂತಹ ಆಗಿದೆ ಯಾರಾದರೂ ಚಿಕಿತ್ಸೆಗೆ ಸಹಾಯ ಮಾಡಲು ಸಾಧ್ಯ ವಿದಲ್ಲಿ ರಹೀಮ್ ಶಾ ಮಕಾಂದಾರ ಕಲ್ಯಾಣ ಕರ್ನಾಟಕ ದರ್ವೇಸು ಸಂಘ ಅಧ್ಯಕ್ಷ ರಿಗೇ ಭೇಟಿ ನೀಡಿ ಇವರ ಮೊಬೈಲ್ ನಂಬರ್ ೯೮೮೦೦೦೦೭೯೪. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ದರ್ವೇಸು ಸಂಘದ ಕಾರ್ಯದರ್ಶಿ ಮೊಹಿನೋದ್ದಿನ್ ಭಂಡಾರಿ,
ದಾದಪೀರ್, ರಸೂಲ್ ಶಾ, ಪೀರಾ ಶಾ, ಸೂರಜ್ ಶಾ, ಮಹಮ್ಮದ ರಫಿ, ಚಾಂದ್ ಪಾಷಾ, ಮೀರು ಶಾ ಸೇರಿದಂತೆ ಮುಂತಾದವರು ಇದ್ದರು.