ಕಾಲು ಜಾರಿ ಬಿದ್ದು ಯುವಕ ಸಾವು

ಸಂಡೂರು, ನ.7: ತಾಲ್ಲೂಕಿನ ತಾರಾನಗರ ಸಮೀಪದ ಬನ್ನಿಹಟ್ಟಿ ಗ್ರಾಮದ ಹೊರವಲಯದಲ್ಲಿ ಮಳೆ ನೀರು ತುಂಬಿದ ದೊಡ್ಡ ಗುಂಡಿಯಲ್ಲಿ ಕಾಲು ಜಾರಿ ಬಿದ್ದು ವಿದ್ಯಾರ್ಥಿ ವಿ. ಶಷಾಂಕ (12) ಶುಕ್ರವಾರ ಮೃತಪಟ್ಟಿದ್ದಾನೆ. ಪಾಲಕರೊಂದಿಗೆ ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ವಿದ್ಯಾರ್ಥಿ ನೀರು ತರಲೆಂದು ಗುಂಡಿಗೆ ಇಳಿದಾಗ ಕಾಲು ಜಾರಿ ಬಿದ್ದಿದ್ದಾನೆ. ಗಾದಿಗನೂರು ಅರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಸಾವು : ತಾಲೂಕಿನ ಯು. ರಾಜಾಪುರ ಗ್ರಾಮಕ್ಕೆ ತೆರಳುವ ವೇಳೆ ಬೈಕ್‍ನಿಂದ ಬಿದ್ದು, ಗಾಯಗೋಂಡಿದ್ದ ಸವಾರ ರುದ್ರೇಶ (17) ಬಳ್ಳಾರಿ ವಿಮ್ಸ್ ದವಖಾನೆಯಲ್ಲಿ ಮೃತಪಟ್ಟಿದ್ದಾನೆ. ಹಿಂಬದಿಯಲ್ಲಿ ಕುಳಿತಿರುವ ಮಾರೆಣ್ಣ (21) ಬಳ್ಳಾರಿ ದವಾಖಾನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೋರಣಗಲ್ಲಿನ ಅರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್.ಎಲ್.ಸಿ. ಕಾಲುವೆಯಲ್ಲಿ ಸಾವು : ಬಳ್ಳಾರಿ ಮೂಲದ ರಸೂಲ್ (15) ಹಾಗೂ ದೋಣಿಮಲೈ ನಿವಾಸಿ ಹಾಜಿಬ್ ಬಂದೆ ನವಾಜ್ (21)) ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಿದ ನಂತರ ಬಟ್ಟೆ ತೊಳೆಯಲು ಕಾಲುವೆ ಬಳಿ ಬಂದ ಸಮಯದಲ್ಲಿ ದುರಂತ ನಡೆದಿದ್ದು, ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಮೃತಪಟ್ಟಿದ್ದಾರೆ. ಬಳ್ಳಾರಿಯ ರಸೂಲ್ ಎನ್ನುವ ಮೃತರ ಕಳೆಬರಹದ ಪತ್ತೆ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿಯ ಕೆರೆಯಲ್ಲಿ ಪತ್ತೆಯಾಗಿದ್ದು, ದೋಣಿಮಲೈ ನಿವಾಸಿ ಹಾಜಿಬ್ ಬಂದೆ ನವಾಜ್ ಮೃತರ ಪತ್ತೆಗಾಗಿ ಕಾರ್ಯ ಚುರುಕುಗೊಂಡಿದೆ. ತೋರನಗಲ್ಲು ಅರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.