ಕಾಲು ಕಳೆದುಕೊಂಡ ಕಾರ್ಯಕರ್ತನಿಗೆ ನಮೋ ಅಭಯಹಸ್ತ

ಕಾಳಗಿ.ಜ.20: ಬಿಜೆಪಿ ಪಕ್ಷ ಸಂಘಟಿಸುವುದರಲ್ಲಿ ಮುಂಚುಣಿಯಲ್ಲಿದ್ದು, ಕಳೆದ 3ನೇ ಏಪ್ರಿಲ್-2022ರಲ್ಲಿ ಪಕ್ಷದ ಸಮಾರಂಭದಲ್ಲಿ ಭಾಗವಹಿಸಿ ಬರುವ ಸಮಯ ಕಾರು ಅಪಘಾತದಲ್ಲಿ ತನ್ನ ಬಲಗಾಲನ್ನೇ ಕಳೆದುಕೊಂಡ ಕಲಬುರಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿರೇಂದ್ರ ಪಾಟೀಲ ರಾಯಕೋಡ ಅವರು, ಅಂಗವಿಕಲನಾದರೂ ಕೂಡ ಗುರುವಾರ ಮಳಖೇಡ ಗ್ರಾಮದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವಾಗ ಸಮಾರಂಭದ ವೇದಿಕೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಜೀ ಅವರು ಯುವಕನನ ಕಾರ್ಯವನ್ನು ಶ್ಲಾಘಿಸಿ ಥಟ್ಟನೆ ನಿಂತು ಕೊಂಡು ಎರಡು ನಿಮಿಷಗಳ ಕಾಲ ಸಮಯವನ್ನು ನೀಡಿದ ಪ್ರಧಾನಿಗಳು ಕಾಲುಕಳೆದುಕೊಂಡ ಯುವಕನಿಗೆ ಅಭಯ ಹಸ್ತ ನೀಡಿದರು.
ಯಾವ ಕಾರಣಕ್ಕೂ ಎದೆಗುಂದದೆ ಮುನ್ನುಗ್ಗಿ ಸಾಧನೆ ಮಾಡಬೇಕು. ತಮ್ಮ ಸಾಧನೆ ಪರರಿಗೆ ಮಾದರಿಯಾಗುವಂತೆ ಜೀವನ ಸಾಗಿಸುವ ಶಕ್ತಿ ತಮ್ಮಲ್ಲಿದೆ ಎಂದು ಆಶಿರ್ವದಿಸಿದರು.

ಪ್ರಧಾನಿಗಳು ಯುವಕನಿಗೆ ಭೇಟಿಯಾಗಿ ಮಾತನಾಡಿದ್ದೆ ತಡ ಯುವಕನಲ್ಲಿ ಎಲ್ಲಿಲ್ಲದ ಖುಷಿ ಹುಟ್ಟಿಕೊಂಡು ನನಗೆ ಇಂದು ಸಾಕ್ಷಾತ್ ದೇವರನ್ನೇ ಭೇಟಿಮಾಡಿ ದಷ್ಟು ಸಂತೋಷವಾಗಿದ್ದು, ಕಳೆದುಕೊಂಡ ಕಾಲು ಮರಳಿ ಪಡೆದಷ್ಟು ಆನಂದ ನನಗಾಗಿದೆ ಎಂದು ಸಂಜೆವಾಣಿ ಯೊಂದಿಗೆ ಯುವಕ ತನ್ನ ಸಂತೋಷವನ್ನು ಹಂಚಿಕೊಂಡನು.