ಕಾಲುವೆ ಹೊಡೆದು ರೈತರ ಹೊಲಗಳಿಗೆ ನೀರು : ಬೆಳೆ ಹಾನಿ ಪರಿಹಾರಕ್ಕೆ ಮನವಿ

ಲಿಂಗಸುಗೂರು.ಆ.೦೫- ತಾಲೂಕಿನ ಕರಡ್‌ಕಲ್ ಸೀಮಾಂತರದ ಜಾಮೀನುಗಳಿಗೆ ಲ್ಯಾಟ್ರಾಲ್ ಕಾಲುವೆಗಳ ನವೀಕರಣ ಕಾಮಗಾರಿ ಅಪೂರ್ಣಗೊಂಡಿದ್ದು ಸುಮಾರು ೨೦ ಎಕೆರೆಗಿಂತ ಹೆಚ್ಚು ಸೂರ್ಯಕಾಂತಿ ತೊಗರಿಬೇಳೆ ಬೆಳೆ ನಾಶವಾಗಿದ್ದು ಪರಿಹಾರಕ್ಕಾಗಿ ರೈತರು ಆಗ್ರಹ. ಸರಕಾರ ಬಹುಕೋಟಿ ವೆಚ್ಚದಲ್ಲಿ ಕಾಲುವೆಗಳ ನವೀಕರಣಕ್ಕೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ಈ ಕಾಲುವೆ ನವೀಕ ರಣ ಕಾಮಗಾರಿ ಅಪೂರ್ಣವಾಗಿದ್ದು, ಲಿಂಗಸುಗೂರ ತಾಲೂಕಿನ ಲಿಂಗಸುಗೂರ ಹೋಬಳಿಯ ಕರಡ್‌ಕಲ್ ಸೀಮಾಂತರದಲ್ಲಿ ಬರುವ ಜಮೀನು ಸರ್ವೆ ನಂಬರ್ ೫೭ .೫೮. ೬೨ ಮತ್ತು ೬೩ ಜಮೀನಿನಲ್ಲಿ ಬರುವ ರಾಂಪುರ ಏತ ನೀರಾವರಿ ಯೋಜನೆಯಲ್ಲಿ ಲ್ಯಾಟ್ರೇಲ್ ಕಾಲುವೆ ನಂ. ೧೧ ರ ಗುಡದನಾಳ ರಸ್ತೆಯ ಪಕ್ಕ ದಲ್ಲಿರುವ ಕಾಲುವೆ ನವೀಕರಣ ಕಾಮಗಾರಿ ಅಪೂರ್ಣಗೊಂಡಿದ್ದು ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ ಅದರು ಮುಖ್ಯ ಕಾಲುವೆಗೆ ನೀರು ಬಿಟ್ಟಿದ್ದು ಉಪ ಕಾಲುವೆಗಳ ಮೂಲಕ ನೀರು ಬಿಟ್ಟು ರೈತರ ಹಿತಾದೃಷ್ಟಿಯಿಂದ ಸರಕಾರ ಬಹುಕೋಟಿ ವೆಚ್ಚದಲ್ಲಿ ಕಾಲುವೆಗಳ ನವೀಕರಣಕ್ಕೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದೆ.
ಆದರೆ ಈ ಕಾಲುವೆ ನವೀಕ ರಣ ಕಾಮಗಾರಿ ಅಪೂರ್ಣವಾಗಿದ್ದು, ಲಿಂಗಸುಗೂರ ಗ್ರಾಮದ ರೈತರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಗ್ರಾಮದಲ್ಲಿರುವ ವಿತರಣಾ ಕಾಲುವೆ ಲ್ಯಾಟ್ರಲ್ ಕಾಲುವೆ ೧೧ ರ ನವೀಕರಣ ಆರಂಭವಾಗಿದ್ದನ್ನು ಕಂಡು ರೈತರು ಖುಷಿ ಪಟ್ಟಿದ್ದರು. ಆದರೆ ಆ ವ್ಯೆಥೆ ಇನ್ನು ಆ ರೈತರನ್ನು ಕಾಡುತ್ತಲಿದೆ ಎಂಬುದಕ್ಕೆ ಈ ಕಾಲುವೆ ಜೀವಂತ ಸಾಕ್ಷಿಯಾಗಿದೆ. ಗ್ರಾಮದ ಹತ್ತಿರದ ಉಪಕಾಲುವೆ ಒಡೆದು ಸಂಪೂರ್ಣ ಹಾಳಾಗಿದೆ. ಇದರಿಂದ ಕಾಲುವೆಗೆ ಬಂದ ನೀರು ನವೀಕರಣಗೊಂಡ ಸ್ಥಳದವರೆಗೆ ನೀರು ಹರಿಯುತ್ತಿದೆ.
ನವೀಕರಣವಾಗದ ಕಾಲುವೆಯಲ್ಲಿ ಕಾಲುವೆಯ ನೀರು ಬಿಟ್ಟಿದ್ದರಿಂದ ಕಾಲುವೆ ನೀರು ಸುಮಾರು ೨೦ ಕ್ಕಿಂತ ಹೆಚ್ಚು ಹೊಲಗಳಿಗೆ ನೀರು ನುಗ್ಗಿದ್ದರಿಂದ ೨೦ ಎಕೆರೆ ಜಮೀನಿನ ಬೆಳೆ ನಾಶವಾಗಿದೆ.
ಶಿವರಾಜ್ ಬಾಳೇಗೌಡ್ರು. ನಮ್ಮ ಹೊಲಗಳಿಗೆ ನೀರು ಹರಿದಿದ್ದುರಿಂದ ಸೂರ್ಯಕಾಂತಿ. ಹಾಗೂ ತೊಗರಿ ಸಂಪೂರ್ಣ ವಾಗಿ ಬೆಳೆ ನಾಶವಾಗಿದ್ದು ಕೊಡಲೇ ಸಂಬ೦ದಪಟ್ಟ ಇಲಾಖೆಯ ಅಧಿಕಾರಿಗಳು ಪರಿಹಾರ ನೀಡಬೇಕೆಂದು ರೈತ ತಾಲುಕು ಆಡಳಿತಕ್ಕೆ ಮನವಿ ಮೂಲಕ ಆಗ್ರಹಿಸಿದರು.