ಕಾಲುವೆ ಹೊಡೆದು ಅಪಾರ ಪ್ರಮಾಣದ ಬೆಳೆ ನಾಶ

ಲಿಂಗಸುಗೂರು.ಸೆ.೦೯- ತಾಲ್ಲೂಕಿನ ಗುಡನಾಳದ ಗ್ರಾಮದ ಜನರಿಗೆ ಹಾಗೂ ರೈತರಿಗೆ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗಬೇಕು ಎಂಬುದು ರೈತರು ಅಳಲು ತೋಡಿಕೊಂಡಿದ್ದಾರೆ.
ರಾಂಪುರ ವಿತರಣಾ ಕಾಲುವೆ ಅವೈಜ್ಞಾನಿಕ ಕಾಲುವೆ ನಿರ್ಮಾಣದಿಂದ ರೈತರು ತೊಂದರೆ ಅನುಭವಿಸುವಂತಾಗಿದೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬುದು ರೈತರ ಆರೋಪ ಕೇಳಿಬಂದಿದೆ ಕೂಡಲೇ ರಾಂಪುರ ವಿತರಣಾ ಕಾಲುವೆ ನಿರ್ಮಾಣದ ಹೊಣೆ ಹೊತ್ತ ನೀರಾವರಿ ಇಲಾಖೆಯ ಅಧಿಕಾರಿಗಳು ಇಂಜಿನಿಯರ್‌ಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವ ಮೂಲಕ ಸರ್ಕಾರದ ನಿಯಮ ಪ್ರಕಾರ ಪರಿಹಾರ ನೀಡಲು ಮುಂದಾಗಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಲ್ಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಕೃಷಿ ಇಲಾಖೆ ಅಧಿಕಾರಿಗಳು ಮಳೆಯಿಂದ ಜಲಾವೃತ ಹೊಲಗಳಿಗೆ ಭೇಟಿ ನೀಡದೆ ಕೇವಲ ಕಛೇರಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಗುಡದನಾಳ ಗ್ರಾಮದ ರೈತರು ಕೃಷಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಯಾದ ಗ್ರಾಮಗಳಿಗೆ ಭೇಟಿ ನೀಡಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಂದಾಗಬೇಕು ಎಂಬುದು ತಾಲ್ಲೂಕಿನ ರೈತರ ಆಗ್ರಹ ವಾಗಿದೆ.
ತಾಲ್ಲೂಕಿನ ಗುಡದನಾಳ ಗ್ರಾಮದ ಕೋಠಾ ಸೀಮೆಯಲ್ಲಿ ಶ್ರೀ ಶರಣಪ್ಪ ಕಚಗನೂರು ಅಪಾರ ಮಳೆಯಿಂದ ಇವರ ಜಮೀನಿನಲ್ಲಿ ಹಾದು ಹೋದ ಏತನೀರವರಿ ಕಾಲುವೆ ಹೊಡೆದು ಅಪಾರ ಪ್ರಮಾಣದ ಮೆಣಿಸಿಕಾಯಿ ಹಾಗೂ ತೊಗರಿ ಬೆಳೆ ನಾಶವಾಗಿದೆ.
ರೈತ ಸಾಲ ಸೂಲ ಮಾಡಿ ಕಷ್ಟಪಟ್ಟು ಬೆಳೆಹಾಕಿದ್ದು. ಅದು ಅಧಿಕಾರಿಗಳ ಬೆಜಾವಾಬ್ದಾರಿಯಿಂದ ಇಂದು ಸರ್ವನಾಶವಾಗಿದೆ ಇದಕ್ಕೆ ಪರಿಹಾರಕ್ಕಾಗಿ ಸರಕಾರಕ್ಕೆ ಮೊರೆಯಿಡುತ್ತಿದ್ದಾರೆ. ಇತ್ತಕಡೆ ಯಾವ ಅಧಿಕಾರಿಗಳು ಗಮನ ಅರಿಸಿಲ್ಲ ಎಂದು ಸರಕಾರ ನಮಗೆ ಏನಾದರೂ ಪರಿಹಾರ ನೀಡಿ ಬೇಕೆಂದು ಹೊಲದ ರೈತರ ಒತ್ತಾಯಿಸಿದ್ದಾರೆ.