ಕಾಲುವೆ ಹೂಳೆತ್ತಲು ಆಗ್ರಹಿಸಿ ಮನವಿ

ಸಿರವಾರ,ಜೂ.೧೦-
ರೈತರ ಹೊಲಗಳ ಮೂಲಕ ಹಾದು ಹೋಗಿರುವ ನೀರಾವರಿ ಕಾಲುವೆಗಳಲ್ಲಿ ತುಂಬಿರುವ ಹೂಳನ್ನು ಎತ್ತಲು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಲ್ಲಿ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಿಡಿಒ ವಿಜಯಕುಮಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ತಾಲೂಕಿನ ನವಲಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ಮುಂಗಾರು ಪ್ರಾರಂಭವಾದ್ದರಿಂದ ತಮ್ಮ ಹೊಲದಲ್ಲಿ ಹಾದು ಹೋಗಿರುವ ತುಂಗಾಭದ್ರಾ ಎಡದಂಡೆ ಮತ್ತು ನಾರಾಯಣಪುರ ಬಲದಂಡೆಯ ೯ಎ ಕಾಲುವೆಯ ಉಪಕಾಲುವೆಗಳಲ್ಲಿ ಹೂಳು ತುಂಬಿದ್ದು, ಅದನ್ನು ರೈತರೆ ತಮ್ಮ ಸ್ವಂತ ಖರ್ಚಿನಲ್ಲಿ ಹೂಳು ತೆಗೆದುಕೊಳ್ಳುತ್ತಿದ್ದಾರೆ ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಕೂಡಲೇ ಈ ಕೆಲಸವನ್ನು ನರೇಗಾದಡಿ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಲಾಯಿತು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕ್ರಪ್ಪಗೌಡ ದೇವತಗಲ್, ಕಾರ್ಯದರ್ಶಿ ಬಸವರಾಜ ನವಲಕಲ್, ಶಿವುಪುತ್ರಪ್ಪ, ಶರಣಪ್ಪಗೌಡ, ಹುಸೇನಪ್ಪ, ಕೆ.ಬಸವರಾಜ, ಶಿವುಕುಮಾರ ನಾರಬಂಡಾ, ಆನಂದಸ್ವಾಮಿ, ಆಂಜನೇಯ, ಹುಸೇನಬಾಷ ಸೇರಿದಂತೆ ಪದಾಧಿಕಾರಿಗಳು ಇದ್ದರು.