(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.19: ತುಂಗಭದ್ರ ಬಲದಂಡೆ ಮೇಲ್ಮಟ್ಟದ ಕಾಲಯವೆಯ ಡಿಪಿ ನಂ 27 ರ ಉಪ ಕಾಲುವೆಯಲ್ಲಿ ಬೆಳೆದಿರುವ ಬೇಲಿ ಕಡಿದು, ಅದರಲ್ಲಿ ತುಂಬಿರುವ ಹೂಳನ್ನು ತೆಗೆಯಬೇಕೆಂದು ರೈತ ಸಂಘ ಒತ್ತಾಯಿಸಿದೆ.
ಸಂಘದ ಜಿಲ್ಲಾ ಅಧ್ಯಕ್ಷ ಸಂಗನಕಲ್ಲು ಕೃಷ್ಣ ಈ ಬಗ್ಗೆ ನಂ.6 ಕಾಲುವೆಯ ಕಾರ್ಯನಿರ್ವಾಹಕ ಇಂಜಿನೀಯರ್ ಅವರಿಗೆ ಇಂದು ಮನವಿ ಸಲ್ಲಿಸಿ. ಕಾಲುವೆಗೆ ನೀರು ಬರುವುದರೊಳಗೆ ಈ ಕಾರ್ಯ ಕೈಗೊಳ್ಳಲು ಆಗ್ರಹಿಸಿದ್ದಾರೆ. ಶೇಖರಪ್ಪ, ಹೇಂಮತರಾಜ್, ಹನುಮನಗೌಡ, ಸಂಗಪ್ಪ ಮೊದಲಾದವರು ಇದ್ದರು