ಕಾಲುವೆ ಸುತ್ತಲೂ ನೂರು ಮೀಟರ್ ನಿಷೇದಾಜ್ಞೆ ಜಾರಿ ತಹಶಿಲ್ದಾರ ಆದೇಶ

ಸಿಂಧನೂರು.ಅ.೩೧- ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ೪೭ ರಿಂದ ೬೦ ನೇ ಮೈಲ್ ವ್ಯಾಪ್ತಿಯಲ್ಲಿನ ವಿತರಣಾ ಕಾಲುವೆ ಮತ್ತು ಉಪ ಕಾಲುವೆಗಳು ಹಾಗೂ ೫೪, ೫೫ ವಿತರಣಾ ಕಾಲುವೆಯ ಎರಡನೇ ಹಂತದ ವರೆಗೆ ಅಕ್ಟೋಬರ್ ೩೦ ಸಂಜೆ ೬ ಗಂಟೆಯಿಂದ ನವಂಬರ್ ೭ ಸಂಜೆ ೬ ಗಂಟೆ ವರೆಗೆ ಕಾಲುವೆ ಪ್ರದೇಶದ ಸುತ್ತಲೂ ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ತಹಶಿಲ್ದಾರ ಸೋಮವಾರ (ಅ.೩೦)ಅರುಣ್ ಕುಮಾರ್ ದೇಸಾಯಿ ಆದೇಶಿಸಿದ್ದಾರೆ.
ಎರಡನೇ ಹಂತದ ವ್ಯಾಪ್ತಿಯಲ್ಲಿ ಬರುವ ಜೋಳ, ಭತ್ತ, ಹತ್ತಿ ಸೇರಿದಂತೆ ಇತರ ಬೆಳೆಗಳು ಹಾಗೂ ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಮತ್ತು ತಾಲೂಕಿನ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕಾಗಿರುವ ಪ್ರಯುಕ್ತ ಸದ್ರಿ ಕಾಲುವೆ ಮೂಲಕ ನೀರನ್ನು ಹರಿಸುತ್ತಿರುವುದರಿಂದ ಕಾಲುವೆಗಳ ಪ್ರದೇಶದಲ್ಲಿ ಸೂಕ್ತ ಬಂದೂಬಸ್ತ್ ವ್ಯವಸ್ಥೆ ಒದಗಿಸುವುದಕ್ಕಾಗಿ ಹಾಗೂ ಸದ್ರಿ ಕಾಲುವೆಗಳ ಪ್ರದೇಶದಲ್ಲಿ ಅನಧಿಕೃತವಾಗಿ ನೀರನ್ನು ಹರಿಸುವದಾಗಲಿ ,ಪಂಪ್ ಸೆಟ್, ತೊಬುಗಳ ಮೂಲಕ ನೀರನ್ನು ಎತ್ತುವದಾಗಲಿ ಮತ್ತು ಗುಂಪಾಗಿ ಜನರು ತಿರುಗಾಡುವುದನ್ನು ಹಾಗೂ ಕಾಲುವೆ ಸುತ್ತಲೂ ನೂರು ಮೀಟರ್ ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯೆ ಸಂಹಿತೆ ೧೯೭೩ ರ ಕಲಂ : ೧೪೪ ರನ್ವಯ ನಿಷೇದಾಜ್ಞೆ ಯನ್ನು ಜಾರಿಗೊಳಿಸಲಾಗಿದೆ .
ನೋಡಲ್ ಅಧಿಕಾರಿಗಳ ನೇಮಕ: ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸುವ ಕುರಿತು ಮೇಲ್ವಿಚಾರಣೆ ಮಾಡಲು ತಾಲುಕ ಮಟ್ಟದ ಅಧಿಕಾರಿಗಳನ್ನು ಕಾಲುವೆಗಳ ಮೇಲೆ ನೋಡಲ್ ಅಧಿಕಾರಿಗಳಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ.ನೀರಿನ ನಿರ್ವಹಣೆ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಿದಂತೆ ಇವರುಗಳು ತಮಗೆ ವಹಿಸಿದ ಡಿಸ್ಟ್ರಿಬ್ಯೂಟರ್ ಗಳಲ್ಲಿ ಸಮರ್ಪಕ ಗೇಜ್ ನಿರ್ವಹಣೆ ಮತ್ತು ಅನಧಿಕೃತ ನೀರಿನ ಬಳಕೆಯನ್ನು ತಡೆಗಟ್ಟುವ ಕಾರ್ಯವನ್ನು ನಿರ್ವಹಿಸಿ ಸದ್ರಿ ಮಾಹಿತಿಯನ್ನು ಪ್ರತಿ ಗಂಟೆಗೊಮ್ಮೆ ತಾಲೂಕ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳುತ್ತಾ ಮೇಲಾಧಿಕಾರಿಗಳ ಆದೇಶ ಪಾಲಿಸಬೇಕು ಎಂದು ಆದೇಶಿಸಲಾಗಿದೆ.