ಕಾಲುವೆ ಮೂಲಕ ಕೆರೆಗೆ ನೀರು ಸರಬರಾಜು

ಮಾನ್ವಿ,ಜು.೦೧-
ಕುಡಿಯುವ ನೀರಿನ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಕೆರೆಯನ್ನು ತುಂಬಿಸಲು ತುಂಗಭದ್ರ ಜಲಾಶಯದಿಂದ ಕಾಲುವೆ ಮೂಲಕ ನೀರನ್ನು ಹರಿಸಲಾಗುವುದು ಕಾಲುವೆಯಲ್ಲಿನ ಕಸ ನೀರಿನೊಂದಿಗೆ ಕೆರೆಯನ್ನು ಸೇರದಂತೆ ಕಾಲುವೆಯನ್ನು ಸ್ವಚ್ಚಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟಸ್ವಾಮಿ ತಿಳಿಸಿದರು.
ಪಟ್ಟಣಕ್ಕೆ ಕುಡಿಯುವ ನೀರನ್ನು ಸಂಗ್ರಹಿಸುವ ರಬಣ್ಣಕಲ್ ಹತ್ತಿರದ ಕೆರೆಗೆ ತುಂಗಭದ್ರ ಜಲಾಶಯದಿಂದ ಕಾಲುವೆ ಮೂಲಕ ನೀರನ್ನು ಬಿಡಲಾಗುತ್ತಿದ್ದು ಕಾಲುವೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ವಿಕ್ಷೀಸಿ ಮಾತನಾಡಿದರು.
ಕಾಲುವೆ ಅಕ್ಕಪಕ್ಕದಲ್ಲಿನ ಕಸವನ್ನು ಕಾಲುವೆಗೆ ಬಿಳದಂತೆ ತೆರವುಗೊಳಿಸಲು ಪುರಸಭೆಯ ಕಿರಿಯ ಆರೋಗ್ಯಧಿಕಾರಿ ಮಹೇಶರವರಿಗೆ ಸೂಚಿಸಿದರು.
ಪುರಸಭೆ ಸಿಬ್ಬಂದಿ ಕಾಲುವೆ ಸುತ್ತಮುತ್ತಲಿನ ಕಸವನ್ನು ಸ್ವಚ್ಚಗೊಳ್ಳಿಸಿದರು.