ಕಾಲುವೆ ನೀರು ಹರಿದು ರೈತರ ಜಮೀನಿಗೆ ಹಾನಿ

ಮುದ್ದೇಬಿಹಾಳ:ಎ.3: ತಾಲೂಕಿನ ಜಂಗಮೂರಾಳ ಗ್ರಾಮದ ಬ್ಬಾದಾಸ್ ಜಾಗೀರದಾರ, ಎಂ ಎ ಬಿರಾದಾರ, ಹಣಮಂತರಾಯ ಚನ್ನಾಪೂರ, ಈರಪ್ಪ ಮಡಿಕೇಶ್ವರ ಬಸಪ್ಪ ಬಿರಾದಾರ, ಎಸ್ ಎಸ್ ಅವನಪ್ಪ ಎನ್ನುವ ರೈತರ ಹೊಗಳಿಗೆ ಚಿಮ್ಮಲಗಿ ಏತ ನೀರಾವರಿ ಕಾಲುವೆ 13 ಆಲಮಟ್ಟಿ ಎಡದಂಡೆ ಎ ಎಲ್ ಬಿ ಸಿ 1 ಮುಖ್ಯ ಕಾಲುವೆ ನೀರು ಹರಿದು ಅಪಾರ ಹಾನಿ ಸಂಭವಿಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಈ ವೇಳೆ ರೈತರು ಸುದ್ದಿಗಾರರೋಂದಿಗೆ ಮಾತನಾಡಿ ಮೊದಲೇ ಅತವೃಷ್ಠಿಯಿಂದ ಬೆಳೆ ನಷ್ವಾಗಿ ಹಾನಿ ಅನುಭವಿಸುತ್ತಿರುವ ನಮಗೆ ಸಧ್ಯ ಚಿಮ್ಮಲಗಿ ಏತ ನೀರಾವರಿ ಕಾಲುವೆ ಒಡೆದು ಸುಮಾರು 6 ರಿಂದ 7 ಹೋಲಗಳಿಗಹೆ ನೀರು ಹರಿದು ಈ ಗಾಗಲೇ ಬಿತ್ತನೆಗಾಗಿ ಭೂಮಿಯನ್ನು ಉಳು ಮಾಡಿ ಹದಮಾಡಲಾಗಿದ್ದ ಮಣ್ಣು ನೀರು ಹರಿದು ಬಂದು ಸಂಪೂರ್ಣ ಮಣ್ಣ ಕೊಚ್ಚಿ ಹೋಗಿದ್ದು. ಇದರಿಂದ ನಮ್ಮ ಬಿತ್ತನೆಗೆ ಬೆಳೆಗೆ ಅಪಾರ ನಷ್ಟವನ್ನುಂಟು ಮಾಡಿದೆ.
ಅತೀವೃಷ್ಠಿಯಿಂದಾಗಿ ಈ ಭಾಗದ ಬಹುತೇಕ ಕಾಲುವೆ ತುಂಬಿಕೊಂಡಿದ್ದು ಆದರೇ ಮುಂಜಾಗೃತವಾಗಿ ಇದನ್ನು ಅರಿಯದೇ ಮುಂಜಾಗೃತವಾಗಿ ಕೆರೆಗಳನ್ನು ತುಂಬಿಸಬೇಕು ಎಂಬ ಉದ್ದೇಶದಿಂದ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿ ಕಾಲುವೆಗಳಿಗೆ ನೀರು ಹರಿಬಿಟ್ಟ ಪರಿಣಾಮ ಕಾಲುವೆಯಿಂದ ನೀರು ಸರಗವಾಗಿ ಮುಂದೆ ಹರಿಯದೇ ನಮ್ಮೇಲ್ಲ ಹೊಲಗಳಿಗೆ ಹರಿದುಬಂದು ಹಾನಿಯಾಗಿದೆ. ಇದಕ್ಕೆ ಕೆಬಿಜೆಎನ್‍ಎಲ್ ಅಧಿಕಾರಿಗಳ ಬೇಜವಾಬ್ದಾರಿ ತನವೇ ಮುಖ್ಯ ಕಾರಣವಾಗಿ ಎಂದು ಆರೋಪಿಸಿದರಲ್ಲದೇ ನಮ್ಮ ಹೊಲಗಳಿಗೆ ಹೊಸ ಮಣ್ಣು ಹೊಡಿವುದು ಜತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.