ಕಾಲುವೆ ನೀರಿಗಾಗಿ ಆ೨೨ಕ್ಕೆ ಪಕ್ಷಾತೀತ ಪ್ರತಿಭಟನೆ

ಸಿರವಾರ,ಆ.೧೯-
ಪಟ್ಟಣದಲ್ಲಿ ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಪಕ್ಷಾತೀತವಾಗಿ ಆ೨೨ ಮಂಗಳವಾರ ರೈತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಜೆ.ಶರಣಪ್ಪಗೌಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿಭಟನೆ ಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿವರ್ಷವೂ ಕೆಳಭಾಗದ ರೈತರ ನೀರಿನ ಬವಣೆ ತಪ್ಪಿದ್ದಲ್ಲ. ಮಳೆಗಾಲದಲ್ಲೂ ಸಹ ನೀರಿನ ನಿರ್ವಹಣೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ.
ಸ್ಥಳೀಯ ಭಾಗದ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ರೈತರಿಗೆ ಸಮರ್ಪಕವಾಗಿ ನೀರನ್ನು ಒದಗಿಸಲು ಈ ಹೋರಾಟ ಬೆಂಬಲಿಸಬೇಕು. ಅಧಿಕಾರಿ ಗಳು ಸೆಕ್ಷನ್ ೧೪೪ ಹಾಕಿಸಿ ಕೆಳಭಾಗಕ್ಕೆ ನೀರು ತಲುಪಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಭೆಯಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಮಲ್ಲನ ಗೌಡ, ಚುಕ್ಕಿ ಶಿವಕುಮಾರ್, ಶಂಕರ ಗೌಡ ಹರವಿ, ವೈ ಬಸನಗೌಡ ಬಲ್ಲಟಗಿ, ಉದಯ ಸಾಹುಕಾರ್ ಚಾಗಭಾವಿ, ಆರ್.ಎಸ್ ಪಾಟೀಲ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ ಗೌಡ ಪನ್ನೂರು, ಜೆ.ದೇವರಾಜ ಗೌಡ, ಜೆ.ಶಿವರಾಮ ರೆಡ್ಡಿ, ಎಸ್ ದಾನನಗೌಡ, ಮಲ್ಲಪ್ಪ ಸಾಹುಕಾರ್, ಚಂದ್ರಶೇಖರಯ್ಯ ಸ್ವಾಮಿ, ಸುರೇಶಗೌಡ ನವಲಕಲ್, ಶ್ರೀನಿವಾಸ ಜಾಲಪೂರು ಕ್ಯಾಂಪ್, ರಾಜಪ್ಪ ಗೌಡ ಗಣದಿನ್ನಿ, ವಿಜಯ ಕುಮಾರ ಗುಡ್ಡದಮನಿ, ರಮೇಶ ಚಿಂಚರಕಿ, ಎಂ.ಪ್ರಕಾಶಪ್ಪ, ಪ.ಪಂ. ಸದಸ್ಯ ಕೃಷ್ಣ ನಾಯಕ, ವಿರುಪಾಕ್ಷಿ ಗೌಡ ಗಣದಿನ್ನಿ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.