ಕಾಲುವೆ ನೀರಾವರಿ ಯೋಜನೆ ಅನುಷ್ಟಾನಕ್ಕೆ ಪ್ರಯತ್ನ

ಮಸ್ಕಿ,ನ.೭-ಎನ್ ಆರ್ ಬಿಸಿ ವ್ಯಾಪ್ತಿಗೆ ಒಳಪಡುವ ೫ ಎ. ಶಾಖಾ ಕಾಲುವೆ ನೀರಾವರಿ ಯೋಜನೆ ಅನುಷ್ಟಾನ ಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ರೈತರು ಆತಂಕ ಪಡ ಬೇಕಾಗಿಲ್ಲ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು. ಇಲ್ಲಿಯ ಬಸವೇಶ್ವರ ನಗರ ಬಳಿಯ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನಾರಯಣ ಪುರ ಬಲ ದಂಡೆ ವ್ಯಾಪ್ತಿಯ ೫ಎ. ಕಾಲುವೆ ಅನುಷ್ಟಾನಕ್ಕೆ ಸರ್ವೆ ಕಾರ್ಯ ನಡೆದಿದೆ ನವಂಬರ್ ಕೊನೆ ಯಲ್ಲಿ ಸರ್ವೆ ವರದಿ ಬಂದ ನಂತರ ಯೋಜನೆ ಸಾಧಕ, ಬಾಧಕಗಳ ಬಗ್ಗೆ ಎಂಜಿನಿಯರ್‌ಗಳ ಚರ್ಚೆ ನಡೆಸಿದ ನಂತರ ನೀರಾವರಿ ಯೋಜನೆ ಅನುಷ್ಟಾನದ ಬಗ್ಗೆ ಸರಕಾರಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ ಹನಿ ನೀರಾವರಿ ಬಗ್ಗೆ ಸರಕಾರ ಆಸಕ್ತಿ ತೋರುತ್ತಿದೆ ರೈತರು ಹನಿ ನೀರಾವರಿ ಬದಲಿಗೆ ಹರಿ ನೀರಾವರಿ ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸುತ್ತಿದ್ದಾರೆ.
೫ಎ. ಕಾಲುವೆನೀರಾವರಿ ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ಸಿಎಂ. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿ ಹೊಳಿ ಜತೆ ಯೋಜನೆ ಬಗ್ಗೆ ಸಾಕಷ್ಟು ಸಲ ಚರ್ಚೆ ನಡೆಸಿದ್ದೆನೆ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದ ವೇಳೆ ಕೂಡ ಶಾಖಾ ಕಾಲುವೆ ಕಾರ್ಯಗತಗೊಳಿಸಲು ಪ್ರಯತ್ನ ಪಟ್ಟಿದ್ದೆನೆ ಕನಕ ನಾಲಾ ಸೇರಿದಂತೆ ಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆನೆ ಎಂದು ಪ್ರತಾಪಗೌಡ ಹೇಳಿದರು.
ಕ್ಷೇತ್ರದ ಉಪ ಚುನಾವಣೆ ಘೋಷಣೆಗೆ ಮುಂಚೆ ೫ಎ. ಕಾಲುವೆ ಯೋಜನೆಗೆ ಸರಕಾರ ಮಂಜೂರಾತಿ ನೀಡಬೇಕು ಎಂಬ ರೈತರ ಬೇಡಿಕೆ ಈಡೇರಿಸುವುದು ಕಷ್ಟದ ಕೆಲಸ ತಾಂತ್ರಿಕ ತೊಂದರೆ ಗಳನ್ನು ಸರಿ ಪಡಿಸಿ ಕಾಲ ಮಿತಿ ಒಳಗೆ ನೀರಾವರಿ ಯೋಜನೆ ಅನುಷ್ಟಾನ ಗೊಳಿಸುವೆ ಕೆಲ ಮುಖಂಡರು ರೈತರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ ರೈತರು ಆವೇಶಕ್ಕೆ ಒಳಗಾಗ ಬಾರದು ಅಪ ಪ್ರಚಾರಕ್ಕೆ ಕಿವಿ ಗೊಡಬಾರದು ಎಂದು ಪ್ರತಾಪಗೌಡ ಪಾಟೀಲ್ ಮನವಿ ಮಾಡಿದರು.
ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಪ್ರತಾಪಗೌಡ ಪಾಟೀಲ್ ಬಸನಗೌಡ ತುರ್ವಿಹಾಳ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಗೊಂಡರು ಯಾವದೇ ರೀತಿಯ ತೊಂದರೆ ಇಲ್ಲ ನಮ್ಮ ಭವಿಷ್ಯ ಮತದಾರ ಫ್ರಭು ಗಳು ನಿರ್ಧರಿಸಲಿದ್ದಾರೆ ಬಿಜೆಪಿ ವಿರುದ್ದ ಯಾರೇ ಸ್ಪರ್ಧೆ ಮಾಡಿದರೂ ಚಿಂತೆ ಇಲ್ಲ ಎಂದರು.
ಕ್ಷೇತ್ರದಲ್ಲಿ ಕೈ ಗೊಂಡ ಜನ ಪರ ಯೋಜನೆಗಳು ನಾನಾ ಅಭಿವೃದ್ದಿ ಕಾರ್ಯಗಳು ಜನರ ಕಣ್ಮುಂದೆ ಇವೆ ಉಪ ಚುನಾವಣೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳ ಜನ ಪರ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿ ಆಗಲಿವೆ ಡಿಸೆಂಬರ್ ನಲ್ಲಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ನಡೆಯುವ ಸಾಧ್ಯತೆ ಗಳಿವೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು ಮುಖಂಡರಾದ ಮಹಾದೇವಪ್ಪ ಗೌಡ, ತಿಮ್ಮನ ಗೌಡ ಗುಡುದೂರು, ಶರಣಯ್ಯ ಸೊಪ್ಪಿಮಠ ಇದ್ದರು.