ಕಾಲುವೆ ದುರಸ್ಥಿ ಪೂರ್ಣ ನೀರು ಬಿಡುಗಡೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06: ಕಳೆದ ಕೆಲ ದಿನಗಳ ಹಿಂದೆ ಎರಡನೇ ಬಾರಿಗೆ ಬೊಂಗಾ ಬಿದ್ದಿದ್ದ ಹೆಚ್.ಎಲ್.ಸಿ ಕಾಲುವೆಯ ದುರಸ್ಥಿ ಕಾರ್ಯ ಮುಗಿದಿದ್ದು ನೀರು ಬಿಡಲಾಗಿದೆ.
ತಾಲೂಕಿನ ಕೊಳಗಲ್ಲು ಗ್ರಾಮದ ಬಳಿ ಆ 27 ರಂದು ಮೊದಲ ಬಾರಿಗೆ ಬೊಂಗಾ ಬಿದ್ದಿತ್ತು. ಅದನ್ನು ದುರಸ್ಥಿ‌ ಮಾಡಿದ ಕೆಲ ದಿನದಲ್ಲಿ  ಅನತಿ ದೂರದಲ್ಲಿ ಮತ್ತೊಂದು ಬೊಂಗಾ ಬಿದ್ದತ್ತು. ಅದರ ದುರಸ್ಥಿಗಾಗಿ ನೀರು ನಿಲ್ಲಿಸಿತ್ತು. ಈಗ ದುರಸ್ಥಿ ಕಾರ್ಯ ಮುಗಿದಿದ್ದು ಇಂದು ಬೆಳಗಿನ ಜಾವ 3 ಗಂಟೆಯಿಂದ ನೀರು ಬಿಡಲಾಗಿದೆ. ನಾಳೆ ಬೆಳಿಗ್ಗೆ ವೇಳೆಗೆ ನೀರು ಪೂರ್ಣ ಪ್ರಮಾಣ ಬರಲಿದ್ದು ಕೃಷಿ ಚಟುವಟಿಕೆಗೆ ನೀರು‌ ಲಭ್ಯ ಆಗಲಿದೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ‌ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.