ಕಾಲುವೆ ಉರುಳಿದ ದ್ವಿಚಕ್ರ ವಾಹನ-ಇಬ್ಬರ ದುರ್ಮರಣ

ಮಂಡ್ಯ : ಆಯತಪ್ಪಿ ದ್ವಿಚಕ್ರ ವಾಹನವೊಂದು ಕಾಲುವೆಗೆ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಭೂತನಹೊಸೂರು ಗ್ರಾಮದಲ್ಲಿ ನಡೆದಿದೆ.
ನಗರದ ಗುತ್ತಲು ಇಂದಿರಾ ಕಾಲೋನಿ ನಿವಾಸಿ ಪ್ರಜ್ವಲ್ (18), ವರುಣ್ (14) ಎಂಬುವರೇ ಮೃತ ದುರ್ದೈವಿಗಳು.


ತಾಲೂಕಿನ ತಗ್ಗಹಳ್ಳಿ ಗ್ರಾಮಕ್ಕೆ ಕಾರ್ಯನಿಮಿತ್ತ ಪ್ರಜ್ವಲ್, ವರುಣ್ ಅವರು ತೆರಳುತ್ತಿದ್ದ ವೇಳೆ ಆಯತಪ್ಪಿ ಭೂತನಹೊಸೂರು ಬಳಿ ಇರುವ ಕಾಲುವೆಗೆ ಉರುಳಿಬಿದ್ದ ಪರಿಣಾಮ ಈ ದುರ್ಘನೆ ನಡೆದಿದೆ.
ದ್ವಿಚಕ್ರ ವಾಹನ ಕಾಲುವೆಗೆ ಬಿದ್ದ ಪರಿಣಾಮ ಪ್ರಜ್ವಲ್ ಮತ್ತು ವರುಣ್ ಅವರ ತಲೆಗೆ ತೀವ್ರ ಪೆಟ್ಟಾಗಿ, ನೀರಿನಲ್ಲೇ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವಗಳನ್ನು ಹೊರತೆಗೆದು ಮಿಮ್ಸ್‌ ಆಸ್ಪತ್ರೆಯ ಶವಾಗಾರದಲ್ಲಿ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಲಾಯಿತು.
ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.