ಕಾಲುವೆಯಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಚನೆ


ಸಂಜೆವಾಣಿ ವಾರ್ತೆ
ಸಂಡೂರು :ಜು:7 ಕಾಲುವೆಯಲ್ಲಿನ ಹೊಲಸು ತ್ಯಾಜ್ಯವನ್ನು ನೋಡಿದ ಲೋಕಾಯುಕ್ತರು ಸ್ಥಳದಲ್ಲಿದ್ದ ತುಂಗಭದ್ರಾ ಮಂಡಳಿಯ ಅಧಿಕಾರಿ ಕುರೇಕುಪ್ಪ ಪುರಸಭೆಯ ಅಧಿಕಾರಿ ಹಾಗೂ ತೋರಣಗಲ್ಲು ಗ್ರ.ಪಂ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತೋರಣಗಲ್ಲು ಬಳಿ ಇರುವ ಕುರೇಕುಪ್ಪ ಪುರಸಭಾ ವ್ಯಾಪ್ತಿಯ ರೈಲ್ವೆ ನಿಲ್ದಾಣ ಪ್ರದೇಸದಲ್ಲಿ ತೋರಣಗಲ್ಲು ಗ್ರಾಮದಲ್ಲಿ  ಹೋಗುವ ತುಂಗಭದ್ರಾ ಮೇಲ್ಮಟ್ಟದ ಕಾಲುವೆಗೆ ಲೋಕಾಯುಕ್ತ ಡಿ.ವೈ.ಎಸ್.ಪಿ.ಯವರಾದ ರಾಮರಾವ್ ಭೇಟಿ ನೀಡಿ ಪರಿಶೀಲಿಸಿದರು. ತುಂಗಭದ್ರ ಕಾಲವೆಯ ಎರಡು ಭಾಗದಲ್ಲಿರುವ ಜನರ ಮನೆಗಳು ಫಾಸ್ಟ್ ಫುಡ್ ಹೋಟೆಲ್‍ಗಳಿಂದ ಕಾಲುವೆಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗ ಕಲುಷಿತಗೊಂಡಿದ್ದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎನ್ನುವ ಸಾರ್ವಜನಿಕರು ದೂರು ನೀಡಿದ್ದನ್ನು ಹಿನ್ನಲೆಯಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳಿಯ ಅದಿಕಾರಿಗಳೊಂದಿಗೆ ಲೋಕಾಯುಕ್ತರು ಚರ್ಚಿಸಿದರು.
ಕಾಲವೆಯ ಪಕ್ಕದಲ್ಲಿ ವಾಸ ಮಾಡುವ ಸಾರ್ವಜನಿಕರಿಗೆ ಫಾಸ್ಟ್ ಪುಡ್ ಮಾಲೀಕರಿಗೆ ತ್ಯಾಜ್ಯವನ್ನು ಕಾಲುವೆಯಲ್ಲಿ ಹಾಕದಂತೆ ಸೂಕ್ತವಾದ ಆದೇಶ ಮತ್ತು ನಿರ್ದೇಶನವನವನು ತಕ್ಷಣ ನೀಡಬೇಕು. ಕಾಲುವೆಯಲ್ಲಿರುವ ತ್ಯಾಜ್ಯವನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಭರದಿಂದ ಸಾಗಿದ ಕಾಮಗಾರಿ ಸಾರ್ವಜನಿಕರ ದೂರಿನ ಆಧಾರದ ಮೇಲೆ ಕುರೇಕುಪ್ಪ ಗ್ರಾಮಕ್ಕೆ ಭೇಟಿ ನೀಡಿ ತ್ಯಾಜ್ಯವನ್ನು ಪರಿಶೀಲಿಸಿ ಅಧಿಕಾರಿಗಳಿಗೆ ತಾಕೀತು ಮಾಡಿದ ನಂತರ 3 ಜೆ.ಸಿ.ಬಿ. ಯಂತ್ರಗಳು 6 ಟ್ರ್ಯಾಕ್ಟರ್‍ಗಳ ಮೂಲಕ ಸಂಪೂರ್ಣವಾಗಿ ಸ್ವಚ್ಚಮಾಡುವ ಕಾರ್ಯಕ್ರಮ ಭರದಿಂದ ಸಾಗಿತು.
ಸ್ವಚ್ಚವಾಗಿಟ್ಟುಕೊಳ್ಳಲು ಜಾಗೃತಿ ಕಾರ್ಯಕ್ರಮ : ಕುರೇಕುಪ್ಪ ಪುರಸಭಾ ವ್ಯಾಪ್ತಿಯ ರೈಲ್ವೆ ನಿಲ್ದಾಣ ಪ್ರದೇಶ, ತೋರಣಗಲ್ಲು ಗ್ರಾಮದ ಹಾದು ಹೋಗುವ ಕಾಲುವೆಯ ಬಲ ಭಾಗದಲ್ಲಿ 450 ಮನೆಗಳು ಎಡಭಾಗದಲ್ಲಿ 350 ಮನೆಗಳು ಹಲವಾರು ಫಾಸ್ಟ್ ಫುಡ್ ಹೋಟೆಲ್‍ಗಳಿದ್ದು ಮನೆಯ ಹೋಟೆಲ್‍ಗಳ ಮಾಲೀಕರ ಕಾಲುವೆಯನ್ನ ಜಾಗೃತಿ ಮೂಡಿಸುವ ಕರ್ಯಕ್ರಮವನ್ನು ಸಂಡೂರು ತಾ.ಪಂ. ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಷಡಾಕ್ಷರಿಯವರು ತಿಳಿಸಿದರು. ಈ ಬಳ್ಳಾರಿಜಿಲ್ಲಯ ಯೋಜನಾ ನಿರ್ದೇಶಕ ಮನ್ಸೂರ್ ಅಲಿ, ತುಂಗಭದ್ರಾ ಮಂಡಳಿಯ ಸಂದಾನಿ ಮೂಲಭೂತ ಸೌಕರ್ಯ ಇಲಾಖೆಯ ಶ್ರೀಕಂಠ ಸ್ವಾಮಿ ಕುರೇಕುಪ್ಪ ಮುಖ್ಯಾಧಿಕಾರಿ ಪಿ.ಡಿಓ ಮೊದಲಾದವರು ಉಪಸ್ತಿತರಿದ್ದರು.