ಕಾಲುವೆಗೆ ಬಂದ ನೀರು ಹೊಲಕ್ಕಿಲ್ಲನೀರು ಬಿಡಲು ರೈತ ಸಂಘದ ಎಚ್ಚರಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,1- ಮುಖ್ಯ ಕಾಲುವೆಗಳಿಗೆ ಬಂದಿರುವ ನೀರು ಉಪ ಕಾಲುವೆಗಳ ಮೂಲಕ ಹೊಲಗಳಿಗೆ ಬಂದಿಲ್ಲ. ಕಾರಣ ರಾಜ್ಯ ಸರ್ಕಾರ ಈವರಗೆ ಕೃಷಿಗೆ ನೀರು ಬಿಡುವ ಕುರಿತು ನಿರ್ಧಾರ ತೆಗೆದುಕೊಳ್ಳದಿರುವುದಾಗಿದೆ.
ಕಳೆದ ಎರೆಡು ಮೂರು ದಿನಗಳಿಂದ ತುಂಗಭದ್ರ ಬಲದಂಡೆಯ ಕೆಳ ಮತ್ತು ಮೇಲ್ಮಟ್ಟದ ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ಆದರೆ ಕೃಷಿ ಚಟುವಟೆಕೆಗೆ ನೀರನ್ನು ಉಪ ಕಾಲಯವೆಗಳ ಮೂಲಕ ಹರಿಸುತ್ತಿಲ್ಲ.
ಈಗಾಗಲರೆ ನೀರು ಬಿಡುವುದು ವಿಳಂಬವಾಗಿದೆ, ಕೂಡಲೇ ನೀರು ಬಿಡಿ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜನೀಯರ್ ಬಸವರಾಜ್ ಅವರನ್ನು ಕೇಳಿದರೆ ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ತಮಗೆ ಯಾವುದೇ ಸೂಚನೆ ನೀಡದ ಕಾರಣ ನೀರು ಬಿಡಲಾಗದು ಎಂದು ಹೇಳಿದ್ದಾರೆ.
ಇಂದು ಸಂಜೆ ಒಳಗೆ ನೀರು ಬಿಡುವ ಕುರಿತು ನಿರ್ಧಾರ ತೆಗೆದುಕೊಳ್ಳದಿದ್ದರೆ. ನಾಳೆ ಆಯಾ ಡಿಪಿಗಳ ಮುಂದೆ ರೈತರು ಹೋರಾಟದ ಮೂಲಕ ನೀರ ಬಿಟ್ಟುಕೊಳ್ಳಲಿದ್ದಾರೆಂದು ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಎಚ್ಚರಿಕೆ ನೀಡಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.