ಕಾಲುವೆಗೆ ನೀರು ಬಿಡುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

ಮಾನ್ವಿ ಮಾ ೧೦ : ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿನ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಂ-೦೪ ಕಾಲುವೆ ಉಪ-ವಿಭಾಗ ಕಚೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ವತಿಯಿಂದ ತುಂಗಭದ್ರಾ ಎಡದಂಡೆ ವಿತರಣೆ ಕಾಲುವೆಗಳಲ್ಲಿ ಆನ್, ಆಫ್ ಪದ್ಧತಿಯಲ್ಲಿ ೭೬ ಡಿಸ್ಟಿಬೂಟರ್‌ನ್ನು ಮುಚ್ಚದಂತೆ ಕರ್ನಾಟಕ ರಾಜ್ಯ ರೈತ ಹಸಿರು ಸೇನೆಯ ಸಂಘಟನೆ ಧರಣಿ ಪ್ರತಿಭಟನೆ ಮಾಡಿದರು.
ನಂತರ ಜಿಲ್ಲಾ ಅಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಮಾತನಾಡಿ ತುಂಗಭದ್ರಾ ಎಡದಂಡೆ ವಿತರಣೆ ಕಾಲುವೆಗಳಲ್ಲಿ “ಆನ್.ಆಫ್ ಪದ್ಧತಿಯಲ್ಲಿ ೭೬ ಡಿಸ್ಪಿಟೂಟರ್‌ನ್ನು ಒಳಪಡಿಸಿದ್ದು ಕಾಲುವೆಯ ಮೇಲ್ಬಾಗದಲ್ಲಿ ಆನಧಿಕೃತವಾಗಿ ನೀರವಾರಿಯಡಿಯಲ್ಲಿ ಸಾವಿರಾರು ಎಕರೆಯಲ್ಲಿ ಕಾಲುವೆ ಯಿಂದ ಆಕ್ರಮವಾಗಿ ನೀರನ್ನು ಪಡೆದುಕೊಂಡು ಭತ್ತವನ್ನು ಬೆಳೆಯುತ್ತಿದ್ದಾರು ನೀರವಾರಿ ಇಲಾಖೆಯ ಆಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲದೆ ಇರುವುದರಿಂದ ೭೬,ನೇ ೭೬/೧. ೭೬/೨. ೭೬/೩. ೭೬/೪. ೭೬/೫. ೭೬/೬. ೭೬/೭ ಹಾಗೂ ಎಲ್ಲಾ ಪಿ.ಒಗಳಲ್ಲಿ ಕಾಲುವೆಯ ಮೂಲಕ ಕೊನೆಯ ಭಾಗದ ರೈತರಿಗೆ ನೀರು ಮುಟ್ಟಿರುವುದಿಲ್ಲ.ರೈತರು ಬೆಳೆದ ಭತ್ತದ ಜಮೀನಿಗೆ ನೀರು ಸರಿಯಾಗಿ ದೊರೆಯದೆ ಬೆಳೆಗಳು ಸಂಪೂರ್ಣ ಒಣಗಿ ಹೋಗುವ ಹಂತದಲ್ಲಿದ್ದು ಆನ್, ಆಫ್ ಪದ್ಧತಿಯಲ್ಲಿ ೭೬ ಡಿಸ್ಟಿಬೂಟರ್‌ನ್ನು ಮುಚ್ಚದೆ ಕಾಲುವೆಯ ಮೂಲಕ ರೈತರ ಜಮೀನಿಗೆ ಸಮರ್ಪಕವಾಗಿ ನೀರನ್ನು ಬಿಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕದ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ, ಉಪಾಧ್ಯಕ್ಷರಾದ ಅಚ್ಚುತ್ ರಾಯ್, ರೈತಮುಖಂಡರಾದ ವೀರನಗೌಡ, ಪ್ರಭುರಾಜ್ ಕೋಡ್ಲಿ,ಶಿವರಾಜ, ರಾಜಸಾಬ್, ಉದ್ದನಪ್ಪಗೌಡ, ರವಿಕುಮಾರ, ವಿರೇಶನಾಯಕ,ರಾಜ ಸೇರಿದಂತೆ ನೂರಾರು ರೈತರು ಭಾಗವಹಿಸಿದರು.