
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.19: ಕಾಲುವೆಗಳಿಗೆ ನೀರು ಬಿಟ್ಟು 15 ದಿನ ಕಳೆದರೂ ಕೆಳ ಭಾಗದ ರೈತರಿಗೆ ಇನ್ನೂ ನೀರು ಬರುತ್ತಿಲ್ಲ. ಕಾಲುವೆಯ ನೀರು ನಿರ್ವಹಣೆಯ ಸಿಬ್ಬಂದಿ ಇತ್ತ ತಿರುಗಿ ನೋಡುತ್ತಿಲ್ಲ. ನಮ್ಮ ಗೋಳು ಕೇಳುವವರಿಲ್ಲ ಎನ್ನುತ್ತಿದ್ದಾರೆ ರೈತರು.
ಇದು ತುಂಗಭದ್ರ ಬಲದಂಡೆ ಮೇಲ್ಮಟ್ಟದ (ಹೆಚ್.ಎಲ್.ಸಿ) ಕಾಲುವೆಯ 16 ನೇ ಡಿಸ್ಟ್ರಿಬ್ಯೂಟರ್ ನ ಕೆಳ ಭಾಗದ ಕಮ್ಮರ ಚೇಡು, ವಿಜ್ಞೇಶ್ವರ ಕ್ಯಾಂಪಿನ ರೈತರ ಸಂಕಷ್ಟ.
ಕಾಲುವೆಯ ಮೇಲ್ಭಾಗದಲ್ಲಿ ಉಪ ಕಾಲುವೆಗಳ ಮೋರಿಗಳುಗೆ ತೂಬುಗಳೇ ಇಲ್ಲದಂತೆ ಮಾಡಿದೆ. ಈ ಕಾಲುವೆಗೆ ಭತ್ತ ನಾಟಿ ಬಾರದು ಎಂದಿದ್ದರೂ ಬೆಳೆ ನಿಯಮ ಉಲ್ಲಂಘನೆ ಮಾಡಿದೆ. ಪದೇ ಪದೇ ಭತ್ತಕ್ಕೆ ನೀರು ಬಳಸುವುದರಿಂದ ಕೆಳಭಾಗದ ರೈತರಿಗೆ ಈ ವರೆಗೆ ನೀರು ದೊರೆಯುತ್ತಿಲ್ಲ.
ಕಾಲುವೆಯ ಲಸ್ಸಗಾರರು ಸಹ ಇತ್ತ ತಿರುಗಿ ನೋಡುತ್ತಿಲ್ಲ. ಕನಿಷ್ಟ ಒಂದು ಬಾರಿ ಕೆಳಕ್ಕೆ ನೀರು ಬರುವಂತೆ ಮಾಡಿ ಬೆಳೆ ಬೆತ್ತನೆಗೆ ಅವಕಾಶ ಮಾಡಿಕೊಡ ಬೇಕು. ಇದಕ್ಕೆ ಸಂಭಂಧಿಸಿದ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
One attachment • Scanned by Gmail