ಕಾಲುವೆಗಳಿಗೆ ನೀರು ಬಿತ್ತನೆ ನಾಟಿ ಕಾರ್ಯ ಚುರುಕು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.4: ಜಿಲ್ಲೆ ಕೈಗಾರಿಕೆಗಳಂತೆ ಕೃಷಿ ಪ್ರಧಾನವಾದುದು ತುಂಗಭದ್ರ ಬಲದಂಡೆಯ ಕೆಳ ಹಾಗೂ ಮೇಲ್ದಂಡೆ ಕಾಲುವೆಗಳ ಮೂಲಕ ಉಪಕಾಲುವೆಗಳಿಗೆ ನಿನ್ನೆಯಿಂದ ನೀರು ಹರಿಬಿಟ್ಟಿರುವುದರಿಂದ ಭತ್ತ ಮೆಣಸಿನಕಾಯಿ ಸಸಿ ನಾಟಿ ಕಾರ್ಯ ಇತರೆ ಬೆಳೆಗಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಬಳ್ಳಾರಿ ಜಿಲ್ಲೆ 1 ಲಕ್ಷದ 8 ಸಾವಿರದ 943 ಹೆಕ್ಟೇರ್ ನೀರಾವರಿ 64953 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಬಿತ್ತನೆ ಮಾಡುವ ಕ್ಷೇತ್ರವಾಗಿದೆ.
ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕಡಿಮೆ ಆಗಿದೆ. ಕಾರಣ ಸಾಮಾನ್ಯವಾಗಿ ಜುಲೈ ಅಂತ್ಯಕ್ಕೆ ಬೆಳೆ ಬೇಕಿದ್ದ 225 ಮೀ.ಮಿ ಮೀಟರ್ ಮಳೆಗೆ 165 ಮಿಲಿ ಮೀಟರ್ ಆಗಿದೆ. ಇದರಿಂದಾಗಿ ಕೇವಲ 36437 ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆಯಾಗಿದೆ.
ನೀರಾವರಿ ಪ್ರದೇಶ 1 ಲಕ್ಷದ 8 ಸಾವಿರ ಹೆಕ್ಟೇರ್ ಇದ್ದರೂ ಈಗ ನೀರು ಬಿಟ್ಟಿರುವುದರಿಂದ ಈ ವರೆಗೆ 14725 ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆಯಾಗಿದೆ.
ಜಿಲ್ಲೆಯ ನೀರಾವರಿ ಪ್ರದೇಶದ 85700 ಹೆಕ್ಟೇರ್ ನಲ್ಲಿ ಭತ್ತ ನಾಟಿ ಮಾಡುವ ಗುರಿಗೆ ಈ ವರೆಗೆ ನದಿ ದಂಡೆಯ ಪ್ರದೇಶದಲ್ಲಿ 8540 ಹೆಕ್ಟೇರ್ ನಲ್ಲಿ ಭತ್ತನಾಟಿ ಮಾಡಲಾಗಿದೆ. ಉಳಿದಂತೆ ಸಸಿ ಮಾಡಿ ಹಾಕಿದ್ದು ಈಗ ನಾಟಿ ಕಾರ್ಯ ಆರಂಭಗೊಂಡಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಈ ವರೆಗೆ ಶೇ.30ರಷ್ಟು ಮಾತ್ರ ಬಿತ್ತನೆಯಾಗಿದೆ. ಭತ್ತದ ಜೊತೆ 15919 ಹೆಕ್ಟೇರ್ ನ್ನು ಮೆಕ್ಕೆಜೋಳ, 2ಸಾವಿರ ಹೆಕ್ಟೇರ್ ನಲ್ಲಿ ತೊಗರಿ, ಸಜ್ಜೆ, 18320 ಹೆಕ್ಟೇರ್ ನಲ್ಲಿ ಹತ್ತಿ ಬಿತ್ತನೆಯಾಗಿದೆ. ಎಂದು ಕೃಷಿ ಇಲಾಖೆಯ ಅಂಕೆ ಸಂಖ್ಯೆ ಹೇಳುತ್ತಿದೆ.
ರೈತರಿಗೆ ರಿಯಾಯಿತಿ ಧರದಲ್ಲಿ ಬಿತ್ತನೆ ಬೀಜ ನೀಡುವ ಕಾರ್ಯರೈತ ಸಂಪರ್ಕ ಕೇಂದ್ರಗಳಿಂದ ಅರ್ಹ ರೈತರಿಗೆ ನೀಡಿದೆ. 2285 ಕ್ವಿಂಟಲ್ ಭತ್ತ, 943 ಕ್ವಿಂಟಲ್ ಮೆಕ್ಕೆಜೋಳ, 735 ಕ್ವಿಂಟಲ್ ಶೇಂಗಾ ಸೇರಿದಂತೆ 4265 ಕ್ವಿಂಟಲ್ ವಿವಿಧ ಬೀಜಗಳನ್ನು ರೈತರಿಗೆ ನೀಡಿದ್ದು 648 ಕ್ವಿಂಟಲ್ ದಾಸ್ತಾನಿದೆ.
ಇನ್ನು ರೈತರಿಗೆ ಅಗತ್ಯವಾದ ರಸಗೊಬ್ಬರ ಬೇಡಿಕೆಗೆ ತಕ್ಕಷ್ಟು ದಾಸ್ತಾನು ಅಂದರೆ ಈ ವರೆಗೆ 69,430 ಟನ್ ರಸಗೊಬ್ಬರವನ್ನು ಮಾರಾಟಗಾರರಿಗೆ ನೀಡಿದ್ದು 45607 ಟನ್ ದಾಸ್ತಾನಿದೆ. ಹೀಗಾಗಿ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಭತ್ತಕ್ಕೆ ಉತ್ತಮ ಬೆಲೆ ಇರುವುದರಿಂದ ಮತ್ತು ಮುಂದೆಯೂ ಮಳೆ ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಭತ್ತದ ನಾಟಿ ಹೆಚ್ಚುವ ಸಾಧ್ಯತೆ ಇದೆ. ಕಾಲುವೆಗೆ ನೀರು ಬಿಡುವುದು ವಿಳಂಬ ಮತ್ತು ಧರ ಕಡಿಮೆ ಇರುವುದರಿಂದ ಮೆಣಸಿನಕಾಯಿ ನಾಟಿ ಕ್ಷೇತ್ರ ಕಡಿಮೆಯಾಗುವ ಸಾಧ್ಯತೆ ಇದೆ.

One attachment • Scanned by Gmail