ಕಾಲುವೆಗಳಲ್ಲಿ ಮುಂದುವರೆದ ಪಂಪ್ ಸೆಟ್ ತೆರವು‌ ಕಾರ್ಯಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ,ಮಾ.26; ಭದ್ರಾ ಜಲಾಯಶದ ಭಾಗದಲ್ಲಿ ಬರುವ ಕಾಲುವೆಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್ ಸೆಟ್ ಗಳ ತೆರವು‌ ಕಾರ್ಯಾಚರಣೆ ಮುಂದುವರೆದಿದೆ.ಇಂದು ಕೆರೆಬಿಳಚಿ ಕಾಲುವೆ ಮಾರ್ಗದಿಂದ ಪ್ರಾರಂಭಗೊಂಡ ಕಾರ್ಯಾಚರಣೆ ಕಾಶಿಪುರ,ಸಿದ್ದನಮಠ,ಮಲ್ಲಾಪುರ,ಗೊಲ್ಲರಹಳ್ಳಿ,ಸಂತೆಬೆನ್ನೂರು ಹಾಗೂ ಸಿದ್ದನಮಠ ಮಾರ್ಗದಲ್ಲಿ ಮುಂದುವರೆದಿದೆಭದ್ರಾ ಜಲಾಶಯದಲ್ಲಿ
ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಇದರಿಂದ ಸರದಿಯನ್ವಯ ನೀರು ಬಿಡಲು ಭದ್ರಾ ಕಾಡಾ ಮಂಡಳಿ ನಿರ್ಧಾರದಂತೆ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ಕೊಡಲು ಕಾಲುವೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳ ತೆರವಿಗಾಗಿ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅಧಿಕಾರಿಗಳ ತಂಡ ರಚಿಸಿ ಆದೇಶಿಸಿದ್ದಾರೆ.ವಿದ್ಯುತ್ ಸಂಪರ್ಕ ಕಲ್ಪಿಸಿದ್ದಲ್ಲಿ ಇದನ್ನು ಕಡಿತಗೊಳಿಸುವುದು ಮತ್ತು ಡೀಸೆಲ್ ಜನರೇಟರ್ ಅಳವಡಿಸಿದ್ದಲ್ಲಿ ಅದನ್ನು ಕಡಿತ ಮಾಡುವುದು ಮತ್ತು ನಾಲೆಯಲ್ಲಿ ನೀರೆತ್ತಲು ಅಳವಡಿಸಿದ ಎಲ್ಲಾ ಪೈಪ್‌ಗಳನ್ನು ತೆರವು ಮಾಡಲು ಮತ್ತು ಒಂದು ವೇಳೆ ತೆರವು ಮಾಡದಿದ್ದಲ್ಲಿ ವಶಕ್ಕೆ ಪಡೆಯಲು ಕಂದಾಯ, ಪಾಲಿಕೆ, ಪೊಲೀಸ್, ನೀರಾವರಿ ಇಲಾಖೆ ಹಾಗೂ ಬೆಸ್ಕಾಂ ಇಂಜಿನಿಯರ್‌ಗಳ ತಂಡವನ್ನು ರಚಿಸಲಾಗಿದೆ.