ಕಾಲುಬಾಯಿ ಜ್ವರದ ವಿರುದ್ಧ ಲಸಿಕಾ ಕಾರ್ಯಕ್ರಮ

ಸಂಜೆವಾಣಿ ನ್ಯೂಸ್
ಮೈಸೂರು: ಏ.01:- ತಾಲ್ಲೂಕು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ರಾಷ್ಟ್ರೀಯ 5ನೇ ಸುತ್ತಿನ ಕಾಲುಬಾಯಿ ಜ್ವರದ ವಿರುದ್ಧ ಲಸಿಕಾ ಕಾರ್ಯಕ್ರಮವನ್ನು ಮೈಸೂರಿನ ನಗರ ಪಶು ಆಸ್ಪತ್ರೆಯ ಆವರಣದಲ್ಲಿ ಉದ್ಘಾಟಿಸಲಾಯಿತು.
ಡಾ.ಸುರೇಶ, ಜಂಟಿನಿರ್ದೇಶಕರು (ರಾಜ್ಯ ವಲಯ), ಡಾ:ವಿಜಯಕುಮಾರ, ವ್ಯವಸ್ಥಾಪಕ ನಿರ್ದೇಶಕರು, ಕೆ.ಎಂ.ಎಫ್, ಮೈಸೂರು, ಡಾ:ನಾಗರಾಜು, ಉಪನಿರ್ದೇಶಕರು, ಮೈಸೂರು, ಕರಿಬಸವರಾಜು, ವ್ಯವಸ್ಥಾಪಕರು, ಕೆ.ಎಂ.ಎಫ್, ಮೈಸೂರು ಮತ್ತು, ಡಾ:ಮ.ಪು.ಪೂರ್ಣಾನಂದ, ಸಹಾಯಕ ನಿರ್ದೇಶಕ, ವೆಂಕಟೇಶ, ಜಾನುವಾರು ಅಭಿವೃದ್ಧಿ ಅಧಿಕಾರಿ , ಸಿಬ್ಬಂದಿಗಳಾದ ಮೀರ್ ಹಸನ್ ಬಾಕ್ರಿ, ಚಿಕ್ಕತಾಯಮ್ಮ, ಅಫ್ಸಾನಖಾನಂ, ವೇಣುಗೋಪಾಲ, ಪ್ರವೀಣ್ ಮತ್ತಿತರರು ಭಾಗವಹಿಸಿದ್ದರು.