ಕಾಲುಜಾರಿ ಬಾವಿಯಲ್ಲಿ ಬಿದ್ದು ಯುವಕ ಸಾವು

ವಿಜಯಪುರ,ಸೆ.15-ಜಮೀನಿನಲ್ಲಿರುವ ಪಂಪ್ ಸೆಟ್ ಆನ್ ಮಾಡಲು ಹೋದ ವೇಳೆ ಕಾಲುಜಾರಿ ಬಾವಿಯೋಳಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.
ಸಮರ್ಥ ರಾಜೇಶ್ ಹಡಪದ ಮೃತಪಟ್ಟ ದುರ್ದೈವಿ. ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಶವವನ್ನು ಹೊರ ತೆಗೆಯಲಾಗಿದೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.