ಕಾಲಾನೂ ಕಾಲದಿಂದ ಇರುವ ಗ್ರಾಮೀಣ ರಸ್ತೆ ಬಂದ್

ಜಮೀನಿನಲ್ಲಿ ಅಕ್ರಮ ಲೇಔಟ ಡೆವೆಲಪರಸರಿಂದ ವಂಚನೆ
ಲಿಂಗಸಗೂರು,ಸೆ.೨೧-
ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರ ರಸ್ತೆ ಸರಕಾರಿ ಪ್ರಥಮ ದರ್ಜೆ ಕಾಲೇಜ ಎದರುಗಡೆ ಇರುವ ಸರಕಾರಿ ಸರ್ವೆನಂ ೪೮ ಎಕರೆ ಅರಣ್ಯ ಜಮೀನಲ್ಲಿ ಪಕದ ಜಮೀನು ಖರೀದಿಸಿದ ಮಾನ್ವಿಯ ಆಂಧ್ರ ಸೂರ್ಯ ಬಾಬು ರಘುರಾಮ ರಡ್ಡಿ ಎಂಬುವರು ಶ್ರೀ ಡೆವಲ್ಪರ್‍ಸ ಅತಿಕ್ರಮಣ ಮಾಡಿ ಅಕ್ರಮ ಲೇಔಟ ನಿರ್ಮಿಸಿದ್ದು ಕಾಲನೂ ಕಾಲದಿಂದ ರಾಮಪೂರ(ಭೂ) ಗ್ರಾಮದ ಕಾಲುರಸ್ತೆ ಬಂದ ಮಾಡಿ ಮೆಟಲಿಂಗ ರಸ್ತೆ ಕಿತ್ತಿಹಾಕಿ ಲೇಔಟ ಚರಂಡಿ ನಿರ್ಮಾಣ ಮಾಡುತ್ತಿದ್ದು ಸದರ ನಿವೇಶನಗಳನ್ನು ಈಗಾಗಲೆ ಕೆಲವರಿಂದ ಹಣ ಪಡೆದು ಮಾರಾಟಕ್ಕೆ ತಯಾರಿ ನಡೆಸಿದ್ದು ಆಂಧ್ರ ಮೂಲದ ವ್ಯಕ್ತಿಯಿಂದ ಜನ ವಂಚನೆಗೋಳಗಾಗುತ್ತಿರುವದು ಬಳಿಕಿಗೆ ಬಂದಿದೆ.
ಸದರಿ ಲೇಔಟ ಕಸಬಾಲಿಂಗಸುಗೂನವರಿಂದ ೩೦ ಸಾವಿರೂಗೆ ಎಕರೆಯಂತೆ ೨೦ ಎಕರೆಖರೀದಿ ಮಾಡಿ ನೋಂದಣೀ ಕಛೇರಿಗೂ ಕಡಿಮೆ ದರ ತೋರಿಸಿ ಮೋಸಮಾಡಿ ನೋಂದಣಿ ಮಾಡಿಸಿದ್ದು ಲೇಔಟಗೆ ಪುರಸಭೆಯಿಂದ ಯಾವದೆ ಮಂಜೂರಾತಿ ಪಡೆದಿಲ್ಲಾ ಹಾಗೂ ನಗರ ಯೋಜನಾ ಪ್ರಾಧಿಕಾರಕ್ಕೆ ಸುಳ್ಳು ನಕ್ಷೆ ಸಲ್ಲಿಸಿರುವದಾಗಿ ಹೇಳಲಾಗುತ್ತೆ.
ಸವೆನಂ೫೦೨ ರಪಕ್ಕದ ೯ ಎಕರೆ ಜಮೀನು ಬೆರೊಬ್ಬರು ಅಂದಾಜು ೮ಕೋಟಿರೂಗೆ ಖರಿದಿಸಿದ್ದು ಇವರು ನೋಂದಣಿ ಇಲಾಖೆಗೆ ವಂಚಿಸಿದ್ದಲ್ಲದೆ ಗ್ರಾಮೀಣ ರಸ್ತ ತೆಗೆದು ಹಾಕಲಾಗುತ್ತಿದ್ದು ಕಾಲೇಜ ವಿದ್ಯರ್ಥಿಗಳಿಗೆ ಸರಕಾರದಿಂದ ನಿರ್ಮಿಸಲಾದ ತಂಗುದಾಣವು ತಮ್ಮ ವ್ಯಾಪ್ತಿಗೆ ಬರುವದೆಂದು ಜಮೀನು ಎನ್.ಎಗಾಗಿ ಅಭೀವೃದ್ದಿಪಡಿಸುತ್ತಿದ್ದು ಪುರಸಭೆಯಿಂದ ಯಾವದೆ ಅನುಮತಿ ಹೊಂದಿರುವದಿಲ್ಲಾ ರಸ್ತೆ ಬಂದ ಮಾಡಿ ಈಗಪಕ್ಕದಲ್ಲ ತೋರಿಸುವ ಆಂಧ್ರದ ಡೆವಲ್ಪರ್‍ಸ ವಿರುದ್ದ ಗ್ರಾಮಸ್ಥರಾದ ರಮೇಶ,ಗಂಗಪ್ಪ ಬಸ್ಸಪ್ಪ ಕರಡಕಲ್ ವೆಂಕಪ್ಪ ಸಗರಪ್ಪ ದೊಣ್ಣಿ ಹುಲ್ಲನಗೌಡ ಹನುಮಂತಕರಿಗೌಡ ರಾಮಪೂರ ಇತರರು ಸಹಾಯಕ ಆಯಕ್ತರಿಗೆ ತಮಗಾದ ಅನ್ಯಾಯ ರಸ್ತೆ ಕುರಿತು ಮನವಿ ಸಲ್ಲಿಸಿದರು ಕದಾಯ ಹಾಗೂ ಅರಣ್ಯ ಇಲಾಖೆಯವರು ಜಾಣಮೌನವಹಿಸಿದ್ದು ಆಂಧ್ರ ಮೂಲದ ವ್ಯಕ್ತಿಯೊಡನೆ ಶ್ಯಾಮಿಲಾಗಿ ಸದರಿ ಅರಣ್ಯ ಹಾಗೂ ಜಮೀನುಗಳ ನಕ್ಷೆ ಬದಲಾಯಿಸರುವಾಗಿ ಹೇಳಲಾಗುತ್ತದೆ
“ಅರಣ್ಯ ಜಮೀನು ಪಕ್ಕ ನಿರ್ಮಿಸಲಾಗುತ್ತಿರುವ ಲೇಔಟ ಬಗ್ಗೆ ಗಮನಕ್ಕೆ ಬಂದಿದ್ದು ಸ್ಥಳ ಪರಿಶಿಲನೆ ಮಾಡಿದ್ದು ಸಂಬಂದಿಸಿದಂತೆ ಸಹಾಯಕ ಆಯುಕ್ತರು ಹಾಗೂ ಅರಣ್ಯ ಇಲಾಖೆ ಮೇಲಾಧಿಕರಿಗಳಿಗೆ ವರದಿ ಸಲ್ಲಿಸುವದಾಗಿ ನೂತನ ವಲಯ ಅರಣ್ಯಾಧಿಕಾರಿ ದಿವ್ಯಾ ಲಿಂಗಸುಗೂರ ತಿಳಿಸಿದ್ದಾರೆ.
“ನೂತನ ಲೇಔಟ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದು ಸರ್ವೇ ಇಲಾಖೆ ಅರಣ್ಯ ಇಲಾಖೆ ವರದಿ ಬಂದ ನಂತರ ತಹಸೀಲ್ದಾರ ಸಹಾಯಕ ಆಯಕ್ತರ ಗಮನಕ್ಕೆ ತರಲಾಗುವದು ಎಂದು ರಾಮಕೃಷ್ಣ ನಾಯ್ಕ ಕಂದಾಯ ನಿರೀಕ್ಷಕ ಲಿಂಗಸುಗೂರ ತಿಳಿಸಿದ್ದಾರೆ”
“ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರ ರಸ್ತೆ ಯಾವದೆ ಲೇಔಟಗಳಿಗೆ ಮಂಜೂರಾತಿ ಅನಮತಿ ನೀಡಿರುವದಿಲ್ಲಾ ಎಂದು ರೆಡ್ಡಿ ರಾಯನಗೌಡ ಪುರಸಭೆ ಮುಖ್ಯಾಧಿಕಾರಿ ಲಿಂಗಸೂಗೂರ ತಿಳಿಸಿದ್ದಾರೆ.