
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ. 10 :- ಹುಟ್ಟಿನಿಂದಲೇ ಎರಡು ಕೈಗಳಿಲ್ಲದ ಲಕ್ಷ್ಮೀದೇವಿ ತನ್ನ ಕಾಲಿನಿಂದ ಸ್ವಗ್ರಾಮ ಗುಂಡುಮುಣುಗಿನ ಮತಗಟ್ಟೆಯಲ್ಲಿ ಇಂದು ಮತಚಲಾಯಿಸಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಬರೆದಿದ್ದಾರೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರರು ತಮ್ಮ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಬೇಕಾಗಿದ್ದು ಎಲ್ಲಾ ಅಂಗಾಂಗಗಳು ಸರಿ ಇದ್ದರು ಹಣ, ಹೆಂಡದ ಆಮಿಷಕ್ಕೆ ಒಳಗಾಗಿ ತಮ್ಮ ಅಮೂಲ್ಯವಾದ ಮತಚಲಾವಣೆಯಿಂದ ವಂಚಿತರಾಗುವವರನ್ನು ಕಾಣುತ್ತೇವೆ ಆದರೆ ಹುಟ್ಟಿನಿಂದಲೇ ಎರಡು ಕೈಗಳಿಲ್ಲದ ಗುಂಡುಮುಣುಗಿನ ಲಕ್ಷ್ಮೀದೇವಿ ಕೈಗಳಿಲ್ಲದಿದ್ದರೆ ಏನಂತೆ ನನ್ನ ಪವಿತ್ರ ಹಕ್ಕಾದ ಮತದಾನವನ್ನು ಕಾಲಿನಿಂದ ಮಾಡುವೆ ಎಂದು ಇನ್ನೊಬ್ಬರಿಗೆ ಮಾದರಿಯಾಗಿ ಇಂದು ಬೆಳಿಗ್ಗೆ ಕೂಡ್ಲಿಗಿ ತಾಲೂಕಿನ ಗುಂಡುಮುಣುಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 120ರ ಮತಗಟ್ಟೆ ಸಂಖ್ಯೆ ಗೆ ತೆರಳಿದ ಎರಡು ಕೈಗಳಿಲ್ಲದ ಲಕ್ಷ್ಮೀದೇವಿ ತನ್ನ ಕಾಲಿನಿಂದಲೇ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹದ ಮತದಾನ ಮಾಡಿದ್ದಾಳೆ.