ಕಾಲಮಿತಿಯೊಳಗೆ ಮತದಾರ ಪಟ್ಟಿ ಪರಿಷ್ಕರಿಸಿ-ಚಂದ್ರಶೇಖರ ನಾಯಕ

ಅತ್ತನೂರು- ಸಿರವಾರ ಜಿಲ್ಲಾಧಿಕಾರಿ ಭೇಟಿ
ಸಿರವಾರ.ನ.೨೦-ಮತದಾರರು ತಮ್ಮ ಗುರುತಿನ ಚೀಟಿಗೆ ಆಧಾರ ಸಂಖ್ಯೆಯನ್ನು ತಮ್ಮ ಸಂಬಂಧ ಪಟ್ಟ ಬಿಎಲ್‌ಓಗಳಿಗೆ ನೀಡಿ, ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೆ ಎಂಬುದು ಖಚಿತ ಪಡಿಸಿಕೊಳಬೇಕು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ತಾಲೂಕಿನ ಅತ್ತನೂರು ಗ್ರಾಮದ ೫,೬,೭,೮ ಹಾಗೂ ಸಿರವಾರ ಪಟ್ಟಣದ ಮತಗಟ್ಟೆ ಸಂಖ್ಯೆ ೨೦.೨೧.೨೩, ೨೫, ೨೬,೨೭,೨೮,೨೯ ಬಿಎಲ್‌ಓಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು ನ.೦೯ ರಿಂದ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆಯನ್ನು ಮಾಡಲಾಗುತ್ತಿದ್ದೂ, ಬಿಎಲ್‌ಓಗಳು ತಮ್ಮ ಮನೆಗೆ ಬಂದಾಗ ತಮ್ಮ ಮತದಾರ ಗುರುತಿನ ಚೀಟಿಗೆ ಆಧಾರ ಸಂಖ್ಯೆಯನ್ನು ನೀಡಿದರೆ ಜೋಡಣೆ ಮಾಡುತ್ತಾರೆ. ಇದರಿಂದಾಗ ಒಬ್ಬ ವ್ಯಕ್ತಿ ಒಂದು ಮತದಾನ ಸಹಾಯವಾಗುತ್ತದೆ.
ಎರಡು ಕಡೆ ಇದ್ದರೆ ಅದನ್ನು ತೆಗೆಯಲಾಗುವುದು. ಈಗಾಗಲೇ ಕೆಲವರು ನಿಗದಿತ ಗುರಿ ತಲುಪಿದ್ದಾರೆ ಇನ್ನೂ ಉಳಿದವರು ಸಹ ಯಾಕೆ ವಿಳಂಭ ಮಾಡುತ್ತಿದ್ದಾರೆಂದು ವೀಕ್ಷಣೆ ಮಾಡಲಾಗುತ್ತಿದೆ. ೧೮ ವರ್ಷ ತುಂಬಿದ ಹಾಗೂ ವಿವಾಹವಾಗಿ ಬಂದಿರುವ ಹೊಸ ಸೇರ್ಪಡೆಗೆ ಅವಕಾಶ ಇದೆ. ಬೇರೆ ಕಡೆಗೆ ಸ್ಥಳಾಂತರವಾದರೆ ತಮಗೆ ಯಾವುದು ಬೇಕು ಅಲಿ ಉಳಿಸಿಕೊಳಬಹುದು. ವ್ಯಕ್ತಿ ಮರಣ ಹೊಂದಿದರೆ ಕುಟುಂಬಸ್ಥರು ತೆಗೆಯುವಂತೆ ಹೇಳಬೇಕು.
ಡಿಸೆಂಬರ್ ೮ ಕ್ಕೆ ಈ ಪ್ರಕ್ರೀಯೆ ಪೂರ್ಣಗೊಳುತ್ತದೆ. ನಂತರ ಅದನ್ನು ಸರ್ಕಾರಕ್ಕೆ ಕಳಿಸಲಾಗುವುದು ೨೦೨೩ ರ ಮತದಾರರ ಪಟ್ಟಿ ಸರ್ಕಾರ ಬಿಡುಗಡೆ ಮಾಡುತ್ತದೆ. ೧೧ ವರ್ಷದಿಂದ ಜನಗಣತಿಯ ಪ್ರಕ್ರೀಯೆ ಜರುಗಿಲ ಎಂದು ಕೇಳಿದಕ್ಕೆ ಅದು ಸರ್ಕಾರದ ಹಂತದಲ್ಲಿ ಜರುಗುವ ಪ್ರಕ್ರೀಯೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪ ತಹಸಿಲ್ದಾರ್ ಸಿದ್ದನಗೌಡ ಮತ್ತು ಕಂದಾಯ ನಿರೀಕ್ಷಕರಾದ ಶ್ರೀನಾಥ, ಚುನಾವಣೆ ಶಾಖೆಯ ರಾಣೋಜಿ ಜಾಗಿರ್ದಾರ, ಗ್ರಾಮ ಸಹಾಯಕ ಅಮರೇಶ, ಪ.ಪಂಚಾಯತಿ ಶರಣಬಸವ, ವಿರೇಶ ನೇಕಾರ, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು ಹಾಜರಿದ್ದರು.