ಕಾಲಮಾನ ಬದಲಾದಂತೆ ಬ್ರಷ್ಟಾಚಾರ ಹೆಚ್ಚಾಗುತ್ತಿದೆ:ವಿವಿಕೆ

ಹುಮನಾಬಾದ:ನ.10:ಕಾಲಮಾನ ಬದಲಾದಂತೆ ಬ್ರಷ್ಟಾಚಾರ ಹೆಚ್ಚಾಗುತ್ತಿದೆ ಶ್ರಮಿಕ ವರ್ಗದವರು ತೊಂದರೆಗೆ ಇಡಾಗುತ್ತಿದ್ದಾರೆ. ಎಲ್ಲರು ಸಮಾನತೆಯಿಂದ ಕೂಡಿ ಬಾಳುವ ವಾತಾವರಣ ನಿರ್ಮಾಣ ಮಾಡುವ ಸಂಕಲ್ಪ ಹೊಂದಲಾಗಿದೆ ಎಂದು ಪಾದಯಾತ್ರೆಯ ರೂವಾರಿ ವಿವಿಕೆ ವಿವರಿಸಿದರು.

ಪಟ್ಟಣದಲ್ಲಿ ಸೋಮವಾರ ಜ್ಞಾನ ಭಿಕ್ಷೆ ಪಾದಯಾತ್ರೆಯಲ್ಲಿ ಮಾತನಾಡಿ, ಸಂಕಲ್ಪ ರಹಿತ ಜೀವನ ಪರಿಪೂರ್ಣವಲ್ಲ ನಾವು ಬಡಾವಣೆ, ಗ್ರಾಮ, ರಾಜ್ಯ ಒಂದು ಗೂಡಿಸಿ ಮನಸ್ಸುಗಳು ಬದಲಾಯಿಸಿ ಸುಂದರ ಬದುಕು ಸಾಗಿಸುವ ಮನೋಸ್ಥೈರ್ಯ ಎಲ್ಲರಲಿ ಬರಬೇಕಾಗಿದೆ.

ಪ್ರಚಲಿತ ದಿನಗಳಲ್ಲಿ ಮೌಲ್ಯಗಳು ಕುಸಿಯುತ್ತಿದ್ದು ಬ್ರಷ್ಟಾಚಾರ ವೃದ್ದಿಯಾಗುತ್ತಿದೆ. ಶ್ರಮಿಕರು, ರೈತರು, ಕೂಲಿ ಕಾರ್ಮಿಕರು ನಿತ್ಯ ದುಡಿಯುವ ಜನರು ಇದಕ್ಕೆ ಹೆಚ್ಚು ಘಾಸೆಯಾಗುತ್ತಿದ್ದಾರೆ. ಹಲವು ಹಂತಗಳಲ್ಲಿ ಶ್ರಮಿಕರಿಗೆ ತೊಂದರೆಯಾಗುತ್ತಿದೆ ಇದನ್ನು ತಡೆಗಟ್ಟಲು ಸಾರ್ವಜನಿಕರು ಮೆಟ್ಟಿ ನಿಲ್ಲುವ ಅವಶ್ಯಕತೆ ಇದೆ ಎಂದರು.

ಯಾರದ್ದು ಹಂಗು ಇಲ್ಲದೆ ಜ್ಞಾನ ಬಿಕ್ಷೆ ಪಾದಯಾತ್ರೆ ಔರಾದ ತಾಲುಕಿನ ವನಮಾರಪಳ್ಳಿಯಿಂದ ರಾಜ್ಯೋತ್ವಸದಿನದಿಂದು ಕಾಲ್ನಡಿಗೆ ಮೂಲಕ ಪಾದಯಾತ್ರೆ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಪಾದಯಾತ್ರೆ ಮಹತ್ವ ಹಾಗು ಜನರಲ್ಲಿ ತಿಳುವಳಿಕೆ ನೀಡುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಸುಮಾರು 200 ದಿನಗಳ ಕಾಲ ನಿರಂತರವಾಗಿ ಪಾದಯಾತ್ರೆ ಮೂಲಕ ಸಂಚರಿಸಲಾಗುತ್ತಿದೆ ಎಂದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ ಮಾತನಾಡಿ, ಒಳ್ಳೆಯ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿರುವುದು ಸಂತಸ ತಂದಿದೆ ಪವಿತ್ರವಾದ ಕನ್ನಡ ಭೂಮಿ ಸಿರಿಯುಳ್ಳದಾಗಿದ್ದರು ಬ್ರಷ್ಟಾಚಾರ, ಮಾನವಿಯ ಮೌಲ್ಯಗಳ ಕುರಿತು ದುಡಿಯುವ ವರ್ಗದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿರುವುದು ಉತ್ತಮ ಬೆಳವಳಿಗೆಯಾಗಿದೆ ಎಂದರು.

ಪ್ರಮುಖರಾದ ಮಹಾದೇವ ಸ್ವಾಮಿ, ತಿರ್ಥಪ್ಪ ಕಲ್ಲುರ, ಕಾಶಿನಾಥ ಕೊಡ್ಲಿ, ಬಸವರಾಜ ಪರೀಟ್, ಮಲ್ಲಿಕಾರ್ಜುನ ಸ್ವಾಮಿ, ಶರಣಪ್ಪ ತಟಪಳ್ಳಿ, ಪ್ರಭಾಕರ ಬಮಶೆಟ್ಟಿ, ವಸಂತ ಪಾಟೀಲ್, ಸುಭಾಷ ತೆಲಾಂಗ, ಎಸ್.ಸಿಂಪಿ ಸೇರಿದಂತೆ ಮತ್ತಿತರರು ಇದ್ದರು.