ಕಾಲಕ್ಕೆ ತಕ್ಕಂತೆ ಬದಲಾಗಬೇಕು:ಗುರುಸಿದ್ದಸ್ವಾಮಿ

ಬಳ್ಳಾರಿ ಏ 16 : ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯಕ್ಕೆ ನಿನ್ನೆ ವೀ.ವಿ.ಸಂಘದ ನೂತನ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಲೇಜಿನ ಅಭಿವೃದ್ದಿ ಕುರಿತು ಚರ್ಚೆ ನಡೆಸಿದರು.
ಅಧ್ಯಕ್ಷ ಗುರುಶಿದ್ದಸ್ವಾಮಿ, ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತನಗೌಡ, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡ ಅವರು ಕಾಲೇಜಿನ ಪ್ರಾಂಶುಪಾಲ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲ ಡಾ|| ಸವಿತಾ ಸೊನೋಳಿ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿಯೊಂದಿಗೆ ಕಾಲೇಜಿನ ಅಭಿವೃದ್ದಿ ಬಗ್ಗೆ ಚರ್ಚಿಸಿದಿರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಎಚ್.ಎಂ.ಗುರುಶಿದ್ದಸ್ವಾಮಿ ಅವರು, ವೀರಶೈವ ವಿದ್ಯಾವರ್ಧಕ ಸಂಘದ ವಿವಿಧ ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು, ಇಂದು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಕಾಲ ಬದಲಾಗುತ್ತಿದೆ, ಬದಲಾಗುವ ತಂತ್ರಜ್ಞಾನ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು, ನೀವು ಬದಲಾಗಿ ನವೀನ ಪದ್ದತಿಗಳನ್ನು ಅಳವಡಿಸಿಕೊಂಡು ಶಿಕ್ಷಣ ನೀಡಬೇಕಿದೆಂದರು.
ಕಾರ್ಯದರ್ಶಿ ಬಿ.ವಿ. ಬಸವರಾಜ್ ಮಾತನಾಡಿ, ಈ ವಿದ್ಯಾಲಯಕ್ಕೆ ಬೆಕಾಗಿರುವ ಸೌಲಭ್ಯಗಳನ್ನು ಒದಗಿಸಲಿ ಕಾಲೇಜಿನ ವಿದ್ಯಾರ್ಥಿಗಳಿಂದ ರಾಜ್ಯ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯುವಂತೆ ಮಾಡಬೇಕೇಂದರು.