ಕಾಲಕಾಲಕ್ಕೆ ಚಿಕಿತ್ಸೆ‌‌‌ ಶೇ.90 ರಷ್ಟು ಗುಣಮುಖ: ಡಾ. ನರೇಶ್ ಸಲಹೆ

ನವದೆಹಲಿ, ಏ.25- ಕೋರೋನಾ ಸೋಂಕಿತರು ಕಾಲಕಾಲಕ್ಕೆ ಲಸಿಕೆ ಪಡೆದರೆ ಮನೆಯಲ್ಲಿದ್ದರೂ ಗುಣಮುಖರಾಗುವ ಪ್ರಮಾಣ ಶೇಕಡ 90ರಷ್ಟು ಇರಲಿದೆ ಎಂದು ದೇಶದ ಪ್ರಖ್ಯಾತ ವೈದ್ಯರಲ್ಲಿ ಒಬ್ಬರಾದ ಡಾ.ನರೇಶ್ ತೆಹರಾನ್ ಹೇಳಿದ್ದಾರೆ.

ಆರ್ ಟಿ- ಪಿಸಿಆರ್ ವರದಿ ಪಾಸಿಟಿವ್ ಬರುತ್ತಿದ್ದಂತೆ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ, ಎಲ್ಲಾ ವೈದ್ಯರು ಶಿಷ್ಟಾಚಾರದ ಪ್ರಕಾರ ಚಿಕಿತ್ಸೆ ನೀಡಲಿದ್ದಾರೆ. ಅದರಂತೆ ಚಿಕಿತ್ಸೆ‌ ಪಡೆಯಿರಿ. ಮನೆಯಲ್ಲಿ ಚಿಕಿತ್ಸೆ ಪಡೆದರೂ ಶೇ.90 ರಷ್ಟು ಗಣಮುಖವಾಗುವ ಸಾದ್ಯತೆಗಳಿವೆ ಎಂದು ದೆಹಲಿಯ ಮೇದಾಂತ ಆಸ್ಪತ್ರೆಯ ಖ್ಯಾತ ವೈದ್ಯ ಸಲಹೆ ನೀಡಿದ್ದಾರೆ.

ಕೋವಿಡ್ ಸೂಕ್ತ ವರ್ತನೆ ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲಿಸಬೇಕು ಆಗಮಾತ್ರ ಕೋವಿಡ್ ಪ್ರಸರಣ ಹರಡುವುದನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಕೊರೊನಾ ಸೋಂಕಿತರು ಯೋಗ ಸೇರಿದಂತೆ ಇನ್ನಿತರೆ ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಅವರ ಶ್ವಾಸಕೋಶ ಸುಧಾರಣೆ ಮತ್ತು ಶ್ವಾಸಕೋಶದ ಆರೋಗ್ಯ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಯೋಗ ಸೇರಿದಂತೆ ಇನ್ನಿತರ ವ್ಯಾಯಾಮ ಮಾಡುವುದರಿಂದ ಸೋಂಕಿತರು ಸುಲಭವಾಗಿ ಆಮ್ಲಜನಕ ತೆಗೆದುಕೊಳ್ಳಲು ಸಹಕಾರಿಯಾಗಲಿದೆ ಇದರಿಂದ ಸೋಂಕಿತರು ಶೀಘ್ರ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಸೋಂಕಿನಿಂದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಗತ್ಯ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು.ಮಾಸ್ಕ್ ಕಡ್ಡಾಯವಾಗಿ ಧರಿಸುವ ಜೊತೆಗೆ ಹೋಗೋದು ಸೂಕ್ತ ವರ್ತನೆ ನಿಯಮಗಳನ್ನು ಪಾಲಿಸಬೇಕು ಆಗ ಮಾತ್ರ ಸೋಂಕಿನಿಂದ ರಕ್ಷಣೆ ಮಾಡಲು ಸಾಧ್ಯ ಎಂದು ಅವರು ಸಲಹೆ ನೀಡಿದರು.

ದೇಶದಲ್ಲಿ ದಿನದಿಂದ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ .ಈ ಹಿನ್ನೆಲೆಯಲ್ಲಿ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಜಗತ್ತಿನಲ್ಲಿ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿದೆ