ಕಾರ್ ಪಲ್ಟಿ: ಮಹಿಳೆ ಮೃತ್ಯು: ನಾಲ್ವರು ಮಕ್ಕಳಿಗೆ ಗಾಯ


ಕುಂದಾಪುರ, ಮಾ.೩೦- ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿ ಇದ್ದ ಮಹಿಳೆಯೊಬ್ಬರು ಮೃತಪಟ್ಟು, ನಾಲ್ವರು ಮಕ್ಕಳು ಗಾಯಗೊಂಡ ಘಟನೆ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ ೬೬ ಸೋಮವಾರ ಸಂಜೆ ನಡೆದಿದೆ.
ಮೃತ ಮಹಿಳೆಯನ್ನು ಕೆಮ್ಮಣ್ಣು ಹೂಡೆಯ ಸಿಬ್ಗತುಲ್ಲಾ ಎಂಬವರ ಪತ್ನಿ ಸುಹಾನ (೩೦) ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಸಿಬ್ಗತುಲ್ಲಾ, ಕಾರಿನಲ್ಲಿದ್ದ ಮಕ್ಕಳಾದ ಸಾಹಿಮ್, ಸಿದ್ರಾ, ಮನ್ಹಾ, ಮರಿಯಮ್ ಎನ್ನುವವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಭಟ್ಕಳದಿಂದ ಹೂಡೆಯ ಮನೆಗೆಂದು ಬರುತ್ತಿದ್ದ ವೇಳೆ ಕಾರು ಮಗುಚಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯ ಗೊಂಡ ಸುಹಾನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.